ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯಗಳ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು (Exit Poll) ಪ್ರಕಟವಾಗುತ್ತಿದ್ದು , ಈ ಬಾರಿ ಛತ್ತೀಸ್‌ಗಢದಲ್ಲಿ (Chhattisgarh) ಸಿಎಂ ಭೂಪೇಶ್ ಬಘೇಲ್ (Bhupesh Baghel) ನೇತೃತ್ವದ ಕಾಂಗ್ರೆಸ್ (Congress) ಸರಳ ಬಹುಮತ ಪಡೆಯುವ ಸಾಧ್ಯತೆಯಿದೆ.
ಸಮೀಕ್ಷೆಗಳು ಬಿಜೆಪಿ (BJP) ಮತ್ತು ಕಾಂಗ್ರೆಸ್ ಮಧ್ಯೆ ಬಿರುಸಿನ ಸ್ಪರ್ಧೆ ನಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 90 ಕ್ಷೇತ್ರಗಳಲ್ಲಿ ಸರಳ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ.
ಯಾವ ಸಮೀಕ್ಷೆಯಲ್ಲಿ ಎಷ್ಟು ಸ್ಥಾನ?
ಛತ್ತೀಸ್‌ಗಢ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-90, ಮ್ಯಾಜಿಕ್ ನಂಬರ್-46)
ಟಿವಿ9: ಬಿಜೆಪಿಗೆ 30-40, ಕಾಂಗ್ರೆಸ್‌ಗೆ 46-56, ಇತರರು 03-05 ಸ್ಥಾನ
ಮ್ಯಾಟ್ರಿಜ್: ಎಕ್ಸಿಟ್ ಪೋಲ್: ಬಿಜೆಪಿಗೆ 34-42 ಸ್ಥಾನ, ಕಾಂಗ್ರೆಸ್‌ಗೆ 44-52, ಇತರರು 0-2 ಸ್ಥಾನ
ಟುಡೇಸ್ ಚಾಣಕ್ಯ: ಕಾಂಗ್ರೆಸ್‌ಗೆ 57, ಬಿಜೆಪಿಗೆ 33, ಇತರರು 0 ಸ್ಥಾನ
ಎಬಿಪಿ ನ್ಯೂಸ್: ಬಿಜೆಪಿ 36-48, ಕಾಂಗ್ರೆಸ್ 41-53
ದೈನಿಕ್ ಭಾಸ್ಕರ್ : ಬಿಜೆಪಿ 35-45, ಕಾಂಗ್ರೆಸ್ 46-55
ಇಂಡಿಯಾ ಟುಡೇ: ಬಿಜೆಪಿ 36-46, ಕಾಂಗ್ರೆಸ್ 40-50
ಇಂಡಿಯಾ ಟಿವಿ: ಬಿಜೆಪಿ 30-40, ಕಾಂಗ್ರೆಸ್ 46-56
ನ್ಯೂಸ್ 18 ಜನ್ ಕೀ ಬಾತ್: ಬಿಜೆಪಿ: 30, ಕಾಂಗ್ರೆಸ್: 47, ಇತರರು: 03
ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ: 36-46, ಕಾಂಗ್ರೆಸ್ 40-50 , ಒಟ್ಟು ಸ್ಥಾನಗಳು: 90