ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ದೇಶದ ಇತರಡೆಗಳಂತೆ , ರಾಜಸ್ತಾನದಲ್ಲೂ ತುಷ್ಟೀಕರಣ ಅತಿರೇಕದ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದ್ದು ಜನತೆಗೆ ಆಘಾತವುಂಟು ಮಾಡಿದೆ . ದೇಶದ ಏಕತೆಗೆ ಗಂಭೀರ ಹಾನಿಯುಂಟು ಮಾಡುವ ಇಂತಹ ಮಾರಕ ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸಿಗೆ ಈ ಬಾರಿ ಜನತೆ ತಕ್ಕ ಪಾಠ ಕಲಿಸಲಿದ್ದು, ನ.25ರಂದು ನಡೆಯುವ ರಾಜಸ್ತಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬುದಾಗಿ ಕೇಂದ್ರ ಗೃಹಸಚಿವ ಅಮಿತ್‌ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಸ್ತಾನದಾದ್ಯಂತ ಎಲ್ಲಿಗೆ ಹೋದರೂ ಕಾಂಗ್ರೆಸ್ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ಎದ್ದುಕಾಣುತ್ತಿದೆ , ಬಿಜೆಪಿ ಗೆಲುವು ಸಾಸುವ ಎಲ್ಲ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ತುಷ್ಟೀಕರಣ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿ ಜನತೆ ರೋಸಿಹೋಗುವಂತೆ ಮಾಡಿದೆ.ರಾಜಸ್ತಾನದಲ್ಲಿನ ಪರಿಸ್ಥಿತಿ ಇಂದು ತೀರಾ ಹದಗೆಟ್ಟಿದ್ದರೆ , ದಲಿತರು ಮತ್ತು ಮಹಿಳೆಯರ ಬದುಕು ಶೋಚನೀಯಾವಸ್ಥೆಗೆ ತಲುಪಿದ್ದರೆ ಅದಕ್ಕೆ ಕಾಂಗ್ರೆಸ್ ಸರಕಾರದ ತುಷ್ಟೀಕರಣ ರಾಜಕೀಯದ ಅತಿರೇಕವೇ ಕಾರಣ. ಕಾಂಗ್ರೆಸ್ ಸರಕಾರ ಹಿಂಸಾಚಾರಿಗಳು ಮತ್ತು ಗಲಭೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಈ ತುಷ್ಟೀಕರಣ ರಾಜಕೀಯವೇ ಕಾರಣ ಎಂದು ಅವರು ನುಡಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಘೋಷಿಸಿದ 7 ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗೆಹ್ಲೋಟ್ ಅವರೇ ಗೆಲ್ಲುವ ಗ್ಯಾರಂಟಿ ಇಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಅವರಿನ್ನೇನು ಗ್ಯಾರಂಟಿ ಕೊಡಬಲ್ಲರು? ರಾಜಸ್ತಾನದ ಅಭಿವೃದ್ಧಿಗೆ ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಸದೆ, ಮಹಿಳೆಯರು ಮತ್ತು ದಲಿತರ ಬದುಕನ್ನು ಶೋಚನೀಯ ಸ್ಥಿತಿಗೆ ತಳ್ಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಹೆಸರಿನಲ್ಲಿ ಮತದಾರರನ್ನು ವಂಚಿಸಲು ಮುಂದಾಗಿದೆ. ಆದರೆ ಮತದಾರರು ಇದಕ್ಕೆ ಬಲಿಯಾಗುವುದಿಲ್ಲ ಎಂಬುದು ರಾಜಸ್ತಾನದೆಲ್ಲೆಡೆ ವ್ಯಕ್ತವಾಗುತ್ತಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ಸವಾಲುಗಳ ನಡುವೆಯೂ ದೇಶದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದು, ಹಿಂದೆಂದೂ ಕಾಣದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿದೆ. ಹಿಂದುಳಿದ ವರ್ಗಗಳ ಆಯೋಗ ವರದಿಯನ್ನೇ ರಾಜೀವ್‌ಗಾಂ ನೇತೃತ್ವದ ಕಾಂಗ್ರೆಸ್ ಹಿಂದೆ ವಿರೋಸಿತ್ತು. ಹಿಂದುಳಿದ ವರ್ಗಗಳಿಗೆ ಸಾಂವಿಧಾನಿಕ ಮನ್ನಣೆ ಕಲ್ಪಿಸಿಕೊಟ್ಟಿದ್ದು ಮೋದಿ ಸರಕಾರ ವಾಗಿದೆ.ಅಯೋಧ್ಯೆ, 370 ನೇ ವಿಧಿ ರದ್ದತಿ , ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿರುವುದನ್ನು ಜನತೆ ಗಮನಿಸಿದೆ .ರಾಜಸ್ತಾನದ ಕೋಟ್ಯಂತರ ಮಂದಿ ಕೇಂದ್ರ ಸರಕಾರದ ಯೋಜನೆಗಳ ಲಾಭವನ್ನು ಪಾರದರ್ಶಕ ರೀತಿಯಲ್ಲಿ ಪಡೆದುಕೊಂಡಿದ್ದಾರೆ ಎಂದರು.