ಹೊಸದಿಗಂತ ವರದಿ ಬಾಗಲಕೋಟೆ:
ಅಧಿಕಾರದ ಆಸೆಗಾಗಿ ಜನರಿಗೆ ಇಲ್ಲ ಸಲ್ಲದ ಆಸೆಯನ್ನು ತೋರಿಸಿ, ಆದನ್ನು ಈಡೇರಿಸಬೇಕಾದ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷಕ್ಕಿಂತ ಕಡೆಯಾಗಿ ವರ್ತಿಸಿದೆ. ಇಂತಹ ದುಃಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬರಬಾರದಿತ್ತು ಎಂದು ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಆಮಿಷ ತೋರಿಸಿ ಅಧಿಕಾರವನ್ನು ಹಿಡಿದಂತಹ ಕಾಂಗ್ರೆಸ್ ಪಕ್ಷದವರು ಹತ್ತು ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದರು ಆದರೆ ಅಕ್ಕಿಯನ್ನು ಸಂಗ್ರಹಿಸದೇ ಹೇಗೆ ಘೋಷಣೆ ಮಾಡಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯದ ಜನರಿಗೆ ಆಮಿಷ ತೋರಿಸಿದ್ದನ್ನು ನೋಡಿದರೆ ಆಮ್ ಆದ್ಮೀ ಪಕ್ಷಕ್ಕೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಗು ಏನೂ ವ್ಯತ್ಯಾಸವಿಲ್ಲ ಎಂದರು.
2019 ರಿಂದ 2024ರ ವರೆಗೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ತೀರ್ಮಾನಿಸಿದೆ. ಅಕ್ಕಿ ಬೇಕಾದರೆ ಮುಖ್ಯಮಂತ್ರಿಯವರು ಪ್ರಧಾನಿಯವರನ್ನು ಭೇಟಿಯಾಗಬೇಕು. ಫುಢ್ ಸೂಪರಿಡೆಂಟ್ ಹೇಳಿದ್ದನ್ನು ಕೇಳಿ ರಾಜ್ಯ ಕಾಂಗ್ರೆಸ್ ಸರ್ಕಾರ ಜವಾಬ್ದಾರಿ ಯಿಂದ ನುಣಚಿಕೊಳ್ಳುವ ಕೆಲಸ ಮಾಡಿಕೊಳ್ಳುತ್ತಿದೆ. ರಾಜ್ಯಕ್ಕೆ 2 ಲಕ್ಷ 28 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಆದರೆ ಕೇಂದ್ರ 7 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಇದೆ ಎಂದು ಹೇಳುತ್ತಿದೆ. ಪ್ರವಾಹ ಇನ್ನಿತರ ಸಮಸ್ಯೆ ದೇಶದ ಜನರಿಗೆ ಆದಾಗ ಕೇಂದ್ರ ಸಂಗ್ರಹ ಮಾಡಿಕೊಂಡಿರುತ್ತದೆ ಆದರೆ ಕಾಂಗ್ರೆಸ್ ಪಕ್ಷದವರು ಜನರಿಗೆ ತಪ್ಪು ಸಂದೇಶ ನೀಡಲು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದರು.
ಪದವಿ ಮುಗಿಸಿದವರೆಗೆಲ್ಲ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಆದರೆ ಈಗ 2023 ರಲ್ಲಿ ಪಾಸಾದಂತವರಿಗೆ ಎಂದು ಅಧಿಕಾರಕ್ಕೆ ಬಂದ ನಂತರ ಷರತ್ತು ಹಾಕಲಾಗುತ್ತಿದೆ. ಮತ ಪಡೆಯುವಾಗ ಒಂದು ಭರವಸೆ ಈಗ ಅಧಿಕಾರಕ್ಕೆ ಬಂದ ನಂತರ ಮತ್ತೊಂದು ಮಾತಾಡುವುದನ್ನು ನೋಡಿದರೆ ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನುಣಚಿಕೊಳ್ಳುವ ಕೆಲಸ ಮಾಡುತ್ತಿದೆ. ಇನ್ನೂ ವಿದ್ಯುತ್ ಉಚಿತ ನೀಡುವ ಗ್ಯಾರಂಟಿಯಿಂದ ಗ್ರಾಹಕರಿಗೆ ಡಬಲ್ ವಿದ್ಯುತ್ ದರ ಹೆಚ್ಚು ಬರುವುದನ್ನು ನೋಡಿದರೆ ಯಾವ ರೀತಿ ರಾಜ್ಯದಲ್ಲಿ ಅಧಿಕಾರ ನಡೆಯಿತ್ತಿದೆ ಎಂದು ಎಲ್ಲವನ್ನು ಜನ ಗಮನಿಸುತ್ತಿದ್ದಾರೆ. ಹೇಳೋದೆ ಒಂದು ಮಾಡೋದು ಇನ್ನೊಂದು ಎಂದು ಕಾಂಗ್ರೆಸ್ ನಡುವಳಿಕೆ ಗೊತ್ತಾಗುತ್ತಿದೆ ಎಂದರು.
ಇಡೀ ವಿಶ್ವವೇ ಕೋವಿಡ್ ನಿಂದ ನಲುಗಿದಾಗ ದೇಶದ ಜನರ ಆರೋಗ್ಯ ದೃಷ್ಟಿಯಿಂದ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ವ್ಯಾಕ್ಸಿನ್ ಕೇಂದ್ರ ಸರ್ಕಾರ ನೀಡಿದೆ. ಇದಲ್ಲದೇ ರೈತರಿಗೆ ವರ್ಷಕ್ಕೆ 6000 ರೂ.ರಾಜ್ಯ ಸರ್ಕಾರ 4000 ರೂ. ಸಂಧ್ಯಾ ಸುರಕ್ಷಾ 1400 ರೂ. ವಿಶಿಷ್ಟಚೇತನರಿಗೆ ವೇತನ ಸೇರಿದಂತೆ ಹಲವಾರು ಯೋಜನೆ ನೀಡುವಾಗ ಯಾವುದೇ ತೊಂದರೆ ಇಲ್ಲದೆ ನೀಡಿದೆ ಆದರೆ ಬಿಜೆಪಿ ಯಾವತ್ತೂ ಜನರಿಗೆ ಆಮಿಷ ತೋರಿಸಲಿಲ್ಲ ಹೇಳಿದ್ದನ್ನು ಮಾಡಿ ತೋರಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಆಮ್ ಆದ್ಮಿ ಪಕ್ಷಕ್ಕಿಂತ ಕಡೆಯಾಗುತ್ತಿದೆ. ರಾಷ್ಟ್ರೀಯ ಪಕ್ಷವೊಂದು ಆಮ್ ಆದ್ಮಿ ಪಕ್ಷದ ರೀತಿ ಉಚಿತ ಘೋಷಣೆ ಮಾಡಿ ಅಧಿಕಾರಕ್ಕೆ ಬರುವುದನ್ನು ನೋಡಿದರೆ ಜನರಿಗೆ ಆಮಿಷ ತೋರಿಸಿದರೆ ಮಾತ್ರ ಅಧಿಕಾರಕ್ಕೆ ಬರುತ್ತೇವೆ ಎಂದು ಸಣ್ಣ ಪಕ್ಷದ ರೀತಿ ವರ್ತಿಸಿದ್ದಾರೆ .ಹೀಗಾಗಿ ಆಮ್ ಆದ್ಮಿ ಪಕ್ಷಕ್ಕೂ ಹಾಗೂ ಕಾಂಗ್ರೆಸ್ ಗೂ ಏನೂ ವ್ಯತ್ಯಾಸವಿಲ್ಲ ಎಂದರು.