ಹೊಸದಿಗಂತ ವರದಿ ಬೆಳಗಾವಿ:
ಕೇಂದ್ರ ಸರಕಾರವು ಬಡತನದ ರೇಖೆಯ ಜನತೆಗೆ ಅನುಕೂಲವಾಗಲಿ ಅಂತ ರಾಮ್ ಜಿ ಹೆಸರು ನಾಮಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಅದನ್ನು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಎರಡು ರಾಜ್ಯಗಳಲ್ಲಿ ಬಿಟ್ಟರೆ, ದೇಶದಲ್ಲಿಯೇ ಭಾರತ ಮುಕ್ತ ಕಾಂಗ್ರೆಸ್ ಆಗುತ್ತದೆ ಎನ್ನುವ ಆತಂಕದದಿಂದ ಹಿಂಗೆಲ್ಲ ಮಾಡಿ ದ್ವೇಷ ಸಾಧಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಸರಕಾರ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ಹೊರ ಹಾಕಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ದ ಜನರನ್ನು ಎತ್ತಿಕಟ್ಟಲು ಬಳಸುತ್ತಿರುವುದು ಖಂಡಿನೀಯ, ಒಕ್ಕೂಟದ ವ್ಯವಸ್ಥೆ ಹಾಳು ಮಾಡುವ ಕುತಂತ್ರ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಚಾಣಾಕ್ಷ ನಡೆಯನ್ನು ಅನುಸರಿಸುತ್ತಿದ್ದಾರೆ. ತಮ್ಮ ಖರ್ಚು ಉಳಿಸಿಕೊಳ್ಳುವುದಕ್ಕೆ ಡಿಕೆಶಿ ಕೈಕೊಡೊಕೆ ಸದನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ ಇವರು ಕಡೆದು ಕಟ್ಟಿಹಾಕಿದ್ದು ಏನು ಮೊದಲು ಹೇಳಿ ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರ ಹಾಕಿದರು.
ಇನ್ನು ಕೇಂದ್ರ ಸಚಿವ ಎಚ್ ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜ್ಯಕಾರಣಕ್ಕೆ ಬರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು. ಕುಮಾರಸ್ವಾಮಿ ಬಂದರೆ ಬಂದರೆ ತಪ್ಪೇನಿದೆ, ಸಿಎಂ ಆಗಿ ಅವರದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಬಳ್ಳಾರಿಯಲ್ಲಿ ಈ ಹಿಂದೆ ಪಾದಯಾತ್ರೆ ಮಾಡಿದಾಗ ಗೊಂದಲ ಕಾಂಗ್ರೆಸ್ ಮಾಡಿತ್ತು, ಅದೇ ಮತ್ತೆ ಅವಕಾಶ ಕೊಡಬಾರದು, ಏನೇ ನಿರ್ಧಾರ ಕೈಗೊಂಡರು ಕೇಂದ್ರದ ಗಮನಕ್ಕೆ ತರಬೇಕು. ಹಾಗೂ ರಾಜ್ಯದ ನಾಯಕರ ಗಮನಕ್ಕೂ ತಂದಿದ್ದೇವೆ ಎಂದರು.
ಕೇಂದ್ರದ ಬಿಜೆಪಿ ರಾಷ್ಟ್ರೀಯ ಹೊಸ ಅಧ್ಯಕ್ಷರನ್ನು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಹೈಕಮಾಂಡ ಉತ್ತಮ ವ್ಯಕ್ತಿಗಳನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಕೆಲವೊಂದಿಷ್ಟು ವಿಚಾರಗಳ ಬಗ್ಗೆ ಕೇಂದ್ರದ ನಾಯಕರ ಜೊತೆಗೆ ಚರ್ಚೆ ಮಾಡುತ್ತೇನೆ, ಎಲ್ಲವೂ ಎಲ್ಲಿ ಚರ್ಚೆ ಮಾಡಬೇಕು ಅಲ್ಲಿ ಮಾಡುತ್ತೇನೆ ಎಂದು ಸ್ವ ಪಕ್ಷದಲ್ಲಿಯೇ ಕೆಲವರ ವಿರುದ್ದ ಅಸಮಾಧಾನ ಹೊರ ಹಾಕಿದರು. ಪಾದಯಾತ್ರೆ ನನ್ನ ವೈಯುಕ್ತಿಕ ವಿರೋಧ ಇಲ್ಲ, ಆದರೆ ಶ್ರೀರಾಮಲು ಹೇಳಿಕೆಯನ್ನು ಗಮನಿಸಿದ್ದೇನೆ, ಹಾಗೂ ಜಿಬಿಎ ಚುನಾವಣೆ ಘೋಷಣೆ ವಿಚಾರಕ್ಕೆ ಈ ಬಗ್ಗೆ ಸ್ಟ್ಯಾಟರ್ಜಿ ಮಾಡುತ್ತೇವೆ ಎಂದರು.


