ಈ ಬಾರಿ ಬರ ಪರಿಹಾರ ಮೊತ್ತ ಕಡಿಮೆ ಮಾಡಿ ರಾಜ್ಯದ ಜನರಿಗೆ ಮೋಸ ಮಾಡಿದ ಕಾಂಗ್ರೆಸ್: ಬಿ.ವೈ. ರಾಘವೇಂದ್ರ

ಹೊಸದಿಗಂತ ವರದಿ ಶಿವಮೊಗ್ಗ :

ರಾಜ್ಯ ಸರ್ಕಾರ ಈ ಬಾರಿ ಬರ ಪರಿಹಾರ ಮೊತ್ತವನ್ನು ಕಡಿಮೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ವತಿಯಿಂದ ಕೈಗೊಳ್ಳಲಾಗಿರುವ ಬರ ಅಧ್ಯಯನಕ್ಕೆ ತೆರಳುವ ಮುನ್ನ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರದ ಅವಯಲ್ಲಿ ನೀಡಿದ್ದ ನೆರೆ ಪರಿಹಾರ ಮೊತ್ತಕ್ಕಿಂತ ಕಡಿಮೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಕಡಿಮೆ ಮಾಡಿದೆ ಎಂದು ದೂರಿದರು.

ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ ನೀಡಬೇಕು. ರಾಜ್ಯವನ್ನು ಬರ ಆವರಿಸಿದ್ದರೂ ಕೂಡ ಎಸ್‌ಡಿಆರ್‌ಎಫ್ ನಿಧಿ ಬಿಡುಗಡೆ ಮಾಡಿಲ್ಲ. ವಿದ್ಯುತ್ ಪೂರೈಕೆ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಷ್ಟತೆ ಇಲ್ಲ. ದಿನಕ್ಕೆ 7 ಗಂಟೆ ತ್ರಿಪೇಸ್ ವಿದ್ಯುತ್ ನೀಡುವುದಾಗಿ ಹೇಳಿದ್ದರೂ ಕೂಡ ನೀಡುತ್ತಿಲ್ಲ ಎಂದರು.

ಈ ಹಿಂದೆಯೇ ಎಚ್ಚರ ವಹಿಸಿ ರೈತರಿಗೆ ವಿದ್ಯುತ್ ನೀಡಿದ್ದರೆ ಬೋರ್‌ವೆಲ್‌ನಿಂದ ಬೆಳೆ ಉಳಿಸಿಕೊಳ್ಳಲು ಅನುಕೂಲವಾಗುತಿತ್ತು. ಆದರೆ ಆ ಕೆಲಸ ಸರ್ಕಾರ ಮಾಡಿಲ್ಲ. ಲೋಡ್ ಶೆಡ್ಡಿಂಗ್ ಬಗ್ಗೆ ಯಾವುದೇ ಬದ್ಧತೆಯೂ ಸರ್ಕಾರಕ್ಕೆ ಇಲ್ಲದಾಗಿದೆ. 2016 ರಿಂದ ಈಚೆಗೆ ಅಕ್ರಮ ಸಕ್ರಮದಲ್ಲಿ ವಿದ್ಯುತ್ ಸಂಪರ್ಕ ನೀಡುವಂತೆ ಹಣ ಕಟ್ಟಿದ್ದರೂ ಕೂಡ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಟ್ರಾನ್‌ಫಾರ‌್ಮರ್‌ನಿಂದ 500 ಮೀಟರ್ ದೂರ ಕೊಳವೆ ಬಾವಿ ಇದ್ದರೆ ಸೋಲಾರ್ ವಿದ್ಯುತ್ ಮಾಡಿಸುವಂತೆ ಹೇಳಲಾಗುತ್ತಿದೆ. ಇದು ರೈತರಿಗೆ ಹೊರೆಯಾಗಲಿದೆ ಎಂದರು.

ಜಿಲ್ಲೆಯಲ್ಲಿ 41,530 ಹೆಕ್ಟೇರ್ ಭತ್ತ ಹಾಳಾಗಿದ್ದು, ಇದರ ಮೌಲ್ಯ ಸುಮಾರು 192 ಕೋಟಿ ರೂ. ಆಗಿದೆ. 38,240 ಹೆಕ್ಟೇರ್ ಜೋಳ ನಷ್ಟವಾಗಿದ್ದುಘಿ, ಇದರ ವೌಲ್ಯ 238 ಕೋಟಿ ಆಗಿದೆ. ಇಷ್ಟು ಪರಿಹಾರ ಕೊಡಲು ಸಾಧ್ಯವಾಗದಿದ್ದರೂ ಎನ್‌ಡಿಆರ್‌ಎ್ ಹಾಗೂ ಎಸ್‌ಡಿಆರ್‌‌ ಮಾನದಂಡದಂತೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಹೆಚ್ಚಿನ ಬರ ಪರಿಹಾರ ನೀಡಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಬಿಜೆಪಿ ತಾಲ್ಲೂಕು ಮಟ್ಟದಿಂದಲೇ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!