ಹೊಸದಿಗಂತ ವರದಿ ಮಂಡ್ಯ:
ಜಾತಿ ಹೆಸರಿನಲ್ಲಿ ಹಿಂದುಗಳನ್ನು ವಿಭಜನೆ ಮಾಡುವುದು ಜಾತಿ ಗಣತಿ ಹಿಂದಿನ ಕಾಂಗ್ರೆಸ್‌ನ ಷಡ್ಯಂತ್ರವಾಗಿದೆ ಎಂದು ಹಿಂದು ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.
ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಅವರಣದಲ್ಲಿ ವಿಶ್ವ ಹಿಂದುಪರಿಷತ್, ಬಜರಂಗಸೇನೆ ವತಿಯಿಂದ ಆಯೋಜಿಸಿದ್ದ ಮಂಡ್ಯ ಹಿಂದು ಮಹೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದುಗಳನ್ನು ವೀರಶೈವ, ಲಿಂಗಾಯತ, ಒಕ್ಕಲಿಗ, ಕುರುಬ, ಕುಂಬಾರ ಹೀಗೆ ಜಾತಿ ಹೆಸರಿನಲ್ಲಿ ಗುರುತಿಸಿ ವಿಭಜಿಸಲಾಗುತ್ತಿದೆ. ಮುಸಲ್ಮಾನರಲ್ಲಿ ಅನೇಕ ಜಾತಿಗಳಿವೆ. ಅವರನ್ನು ಜಾತಿ ಹೆಸರಿನಲ್ಲಿ ಗುರುತಿಸುವ ಪ್ರಯತ್ನಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ಅವರಲ್ಲಿರುವ ಎಲ್ಲಾ ಜಾತಿಯವರನ್ನು ಒಟ್ಟಾಗಿ ಮುಸಲ್ಮಾನರು ಎಂದು ಗುರುತಿಸುತ್ತಾ, ಹಿಂದುಗಳನ್ನು ಒಡೆದು ಅಳುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಸಲ್ಮಾನರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸುವುದರೊಂದಿಗೆ ಬಜೆಟ್‌ನಲ್ಲಿ ದೊಡ್ಡ ಪಾಲನ್ನು ನೀಡುವುದು ಕಾಂಗ್ರೆಸ್ ನೀತಿಯಾಗಿದೆ. ಇದು ಮುಸ್ಲಿಮರ ತುಷ್ಠೀಕರಣವಲ್ಲದೆ ಮತ್ತೇನು ಎಂದು ಟೀಕಿಸಿದರು.