ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಅದಾನಿ ವಿರುದ್ಧ ಕಾಂಗ್ರೆಸ್ ನಾಳೆ (ಸೋಮವಾರ) ಸಂಸತ್ತಿನಿಂದ ಬೀದಿಗಿಳಿದು ಪ್ರತಿಭಟನೆ ನಡೆಸಲಿದೆ. ಇದರ ಜೊತೆಗೆ ದೇಶಾದ್ಯಂತ ಜೀವ ವಿಮಾ ನಿಗಮ (LIC) ಕಚೇರಿಗಳು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಗಳ ಮುಂದೆ ಪ್ರತಿಭಟನೆ ನಡೆಸಲು ಪಕ್ಷ ನಿರ್ಧರಿಸಿದೆ.
ದೆಹಲಿಯಲ್ಲಿಎಸ್‌ಬಿಐ ಕಚೇರಿ ಮತ್ತು ಪಾರ್ಲಿಮೆಂಟ್ ಪೊಲೀಸ್ ಠಾಣೆಯಲ್ಲಿರುವ ಎಲ್‌ಐಸಿ ಕಚೇರಿಯ ಹೊರಗೆ ಎನ್‌ಎಸ್‌ಯುಐ ಯೂತ್ ಕಾಂಗ್ರೆಸ್ ಮೂಲಕ ಪ್ರದರ್ಶನ ನಡೆಯಲಿದೆ.
ಕಾಂಗ್ರೆಸ್ ಸಂಸದರು ನಾಳೆ ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.