ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ವಿಧಾನಸಭೆ ಚುನಾವಣೆಯ ಪೂರ್ಣ ಫಲಿತಾಂಶ ಹೊರಬೀಳುವ ಮುನ್ನವೇ ಕಾಂಗ್ರೆಸ್ ತನ್ನ ಶಾಸಕರನ್ನು ರಕ್ಷಿಕಿಸೊಳ್ಳುವ ತಂತ್ರಕ್ಕೆ ಮುಂದಾಗಿದ್ದು, ಗೆದ್ದ ಶಾಸಕರು ಕೈತಪ್ಪಿ ಹೋಗದಂತೆ ಭಾರೀ ಎಚ್ಚರಿಕೆ ವಹಿಸಿದೆ.
ಈಗಾಗಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳಿಗೆ ಮತ ಎಣಿಕೆ ಕೇಂದ್ರದಿಂದ ಹೊರಗೆ ಬರದಂತೆ ಸೂಚನೆ ನೀಡಿದೆ. ಜೊತೆಗೆ ಎಐಸಿಸಿ ವೀಕ್ಷಕರು ಮತ ಎಣಿಕೆ ಬಳಿ ಹಾಜರಿದ್ದು, ಎಐಸಿಸಿನ ಇನ್ನಷ್ಟು ನಾಯಕರು ತೆಲಂಗಾಣಕ್ಕೆ ಶೀಘ್ರವೇ ಬಂದು ಸೇರಿಕೊಳ್ಳಲಿದ್ದಾರೆ.