ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ನಾವು ಮಾಡಿದ ಯೋಜನೆಗಳ ಕ್ರೆಡಿಟ್‌ನ್ನು ತೆಗೆದುಕೊಂಡಿದೆ. ಲೂಟಿ ಸರ್ಕಾರಕ್ಕೆ ಜನರೇ ಉತ್ತರ ಕೊಡುತ್ತಾರೆ. ರಾಜ್ಯಪಾಲರ ಭಾಷಣದಲ್ಲಿಯೂ ಕಾಂಗ್ರೆಸ್ ಕೈ ಕಾಣಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದಲ್ಲಿ ಹೇಳುವಂತೆ ರಾಜ್ಯ ಸರ್ಕಾರ ಯಾವ ಅಭಿವೃದ್ಧಿ, ಸಾಧನೆಯನ್ನೂ ಮಾಡಿಲ್ಲ. ಕೈ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ. ಜನರನ್ನು ಕೊಳ್ಳೆ ಹೊಡೆಯೋದು ಸಾಧನೆ ಅಂತಾದ್ರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ.
ಕೇಂದ್ರದ ಯೋಜನೆಗಳನ್ನು ನಮ್ದು ಅನ್ನೋದು, ಕೋಮುವಾದಕ್ಕೆ ಉತ್ತೇಜನ ನೀಡೋದು, ಕೇಂದ್ರದ ಮೇಲೆ ಗೂಬೆ ಕೂರ್ಸೋದು, ಇಷ್ಟೆ ಕಾಂಗ್ರೆಸ್ ಸರ್ಕಾರ ಮಾಡಿರೋ ಸಾಧನೆ ಎಂದು ವ್ಯಂಗ್ಯ ಮಾಡಿದ್ದಾರೆ.