ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ಮೂರು ಪಕ್ಷಗಳು ಸಭೆ, ಸಮಾರಂಭ, ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಈ ಸಮಯದಲ್ಲಿ, ಕಾಂಗ್ರೆಸ್ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ರಾತ್ರಿ ಬೆಂಗಳೂರಿನ ಒಂದೇ ಹೋಟೆಲ್ನಲ್ಲಿ ಎರಡು ಪ್ರತ್ಯೇಕ ಸಭೆ ನಡೆದಿವೆ.
ರಾತ್ರಿ ಬೆಂಗಳೂರಿನ ಒಂದೇ ಹೋಟೆಲ್ ನಲ್ಲಿ ಕಾಂಗ್ರೆಸ್ ನ ಎರಡು ಪ್ರತ್ಯೇಕ ಸಭೆಗಳು ನಡೆದವು. ಒಂದೆಡೆ ಹಳೇ ಮೈಸೂರು ಭಾಗದ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಮುಖಂಡರ ಜತೆ ಸಭೆ, ಮತ್ತೊಂದೆಡೆ ಕಲಬುರಗಿ ಭಾಗದ ಕಾಂಗ್ರೆಸ್ ಮುಖಂಡರ ಜತೆ ಸಭೆ ನಡೆಸಲಾಯಿತು ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಪಕ್ಷದ ಸಿದ್ಧತೆ ಹಾಗೂ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಯಾವ ರೀತಿ ಬದಲಾವಣೆಗಳು ಆಗಲಿವೆ ಎಂಬುದು ನೋಡಬೇಕಿದೆ.