ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್‌ನವರು ಶ್ರೀರಾಮನ ವಿರೋಧಿಗಳು ಎಂದು ಎಲ್ಲೆಡೆ ಅಪಪ್ರಚಾರ ಮಾಡಲಾಗುತ್ತಿದೆ ಇದು ಸರಿಯಲ್ಲ, ಇದನ್ನು ನಾವು ಖಂಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮಮಂದಿರ ಲೋಕಾರ್ಪಣೆಗೆ ರಜೆ ಕೊಟ್ಟಿಲ್ಲ ಅನ್ನೋ ವಿಷಯವನ್ನೇ ಇಟ್ಟುಕೊಂಡು ಇಡೀ ಕಾಂಗ್ರೆಸ್ ರಾಮವಿರೋಧಿ ಎಂದು ಅಪಪ್ರಚಾರ ಮಾಡಲಾಗಿದೆ. ನಾವೂ ಕೂಡ ರಾಮಭಕ್ತರೇ. ನಾನು ಶ್ರೀರಾಮನ ದೇಗುಲ ಲೋಕಾರ್ಪಣೆ ಮಾಡಿದ್ದೇನೆ. ಸಮಯ ಸಿಕ್ಕಾಗ ಅಯೋಧ್ಯೆಗೂ ಹೋಗಿ ಬರುತ್ತೇನೆ. ಗಾಂಧೀಜಿ ಹೇಳಿದ ರಾಮನನ್ನು ನಾವು ಪೂಜಿಸುತ್ತೇವೆ. ಎಷ್ಟೋ ರಾಜ್ಯಗಳು ರಜೆ ಘೋಷಣೆ ಮಾಡಿಲ್ಲ. ಇದರಲ್ಲಿ ತಪ್ಪದೇನಿದೆ, ಕಾಯಕವೇ ಕೈಲಾಸ ಎನ್ನುವುದನ್ನು ಮರೆಯಬಾರದು ಎಂದು ಹೇಳಿದ್ದಾರೆ.