ಕಾಂಗ್ರೆಸ್‌ ತನ್ನ ಮೇಲೆ ತಾನೇ ಸಂಶಯ ಪಡುತ್ತಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

ಹೊಸದಿಗಂತ ವರದಿ, ನವದೆಹಲಿ:

ಲೋಕಸಭೆ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿದ್ದು, ಕಾಂಗ್ರೆಸ್ ತನ್ನ ಆಡಳಿತದ ಮೇಲೆ ತಾನೇ ಸಂಶಯ ಪಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದರು.

“ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಅಕ್ರಮ ನಡೆದ ಬಗ್ಗೆ ಅನುಮಾನವಿದೆ” ಎಂದಿರುವ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ನವದೆಹಲಿಯಲ್ಲಿಂದು ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ಸೋಲನ್ನು ಅರಗಿಸಿಕೊಳ್ಳಲಾಗದ ಕಾಂಗ್ರೆಸ್‌ಗೆ ಎಲ್ಲೆದರ ಮೇಲೂ ಬರೀ ಅನುಮಾನ ಪಡುವುದೇ ಆಯಿತು ಎಂದು ಟೀಕಿಸಿದರು.

2024ರ ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವೇ ಇದೆ. ಚುನಾವಣಾ ಆಯೋಗದಲ್ಲಿ ಅಂದರೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹುದ್ದೆಗಳಲ್ಲಿ ತಮ್ಮವರೇ ಇದ್ದಾರೆ. ಈಗ ಅವರನ್ನೇ ಅನುಮಾನದಿಂದ ಕಾಣುತ್ತಿದ್ದಾರೆ ಎಂದು ಸಿಎಂ ಹೇಳಿಕೆಗೆ ಸಚಿವ ಜೋಶಿ ತಿರುಗೇಟು ನೀಡಿದರು.

2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತದೆ. ಆಗ ಚುನಾವಣಾ ಆಯೋಗ, ಇವಿಎಂ ಸರಿಯಾಗೇ ಇತ್ತು. ಆದರೆ, ಈಗ ಲೋಕಸಭೆ ಚುನಾವಣೆಯಲ್ಲಿ ತನಗೆ ಕಡಿಮೆ ಸ್ಥಾನಗಳು ಬಂದಾಕ್ಷಣ ಅಕ್ರಮದ ಸಂಶಯ ಬರುತ್ತದೆಯೇ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿತು. ಆಗ ಇವರಿಗೆ ಚುನಾವಣೆ ಆಯೋಗ ಮತ್ತು ಇವಿಎಂ ಮೇಲೆ, ಮತದಾರರ ಪಟ್ಟಿ ಮೇಲೆ ಅನುಮಾನ ಬರಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸೀಟುಗಳು ಬಂದಿವೆ ಎಂಬ ಕಾರಣಕ್ಕೆ ಈ ರೀತಿ ಹುಸಿ ಆರೋಪ ಮಾಡುತ್ತಿದೆ. ಅನುಮಾನ ಪಡುತ್ತಿದೆ. ಕಾಂಗ್ರೆಸ್‌ ನಾಯಕರದ್ದು ಇದೆಂಥ ನಡೆ ಎಡೆ? ಎಂದು ಪ್ರಶ್ನಿಸಿದರು.

ರಾಹುಲ್‌ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಅದೇನು ಹೇಳುತ್ತಿದ್ದಾರೆ ಅರ್ಥವಾಗುತ್ತಿಲ್ಲ. ರಾಹುಲ್‌ ಗಾಂಧಿ ಪತ್ರ ಬರೆದರು. ಮಹಾರಾಷ್ಟ್ರ ಚುನಾವಣೆ ಬಳಿಕ SIR (special intensive review) ಆರಂಭಿಸಿದೆ. ಈಗ ಇದರ ವಿರುದ್ಧವೂ ಪ್ರತಿಭಟಿಸುತ್ತಿದ್ದಾರೆ ಎಂದು ಜೋಶಿ ಆಕ್ಷೇಪಿಸಿದರು.

ರಾಹುಲ್‌ ಗಾಂಧಿಗೆ ತಿರುಗೇಟು: ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದೆ. ರಾಹುಲ್‌ ಗಾಂಧಿ ಅವರಿಗೆ ಆಗ ಎಲ್ಲದೂ ಸರಿಯಿತ್ತು. 2024ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗ, ಇವಿಎಂ ಮೇಲೆ ಅನುಮಾನವಿದೆ ಎನ್ನುತ್ತಾರೆ. ಈ ಚುನಾವಣೆ ವೇಳೆ ಅಲ್ಲಿ ನಿಮ್ಮದೇ ಸರ್ಕಾರವಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿ ಹಾಗಾದರೆ ಎಂದು ಸಚಿವ ಜೋಶಿ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

  1. Though the people of chamarajanagar has supported congress in all the constituencies congress stiil negligence towards the project

LEAVE A REPLY

Please enter your comment!
Please enter your name here

error: Content is protected !!