ಹೊಸದಿಗಂತ, ಬಳ್ಳಾರಿ:
ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು ಸತ್ಯ, ಕಾಂಗ್ರೆಸ್ ಇದನ್ನು ತಿರುಚಲು ಮುಂದಾಗಿದ್ದು, ಕೂಡಲೇ ಎನ್‌ಎಐ ತನಿಖೆ ನಡೆಸಿ ತಪ್ಪಿಸ್ಥರು ಯಾರೇ ಇರಲಿ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಸೀರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು, ಅಕ್ಷ್ಯಮ್ಯ ಅಪರಾಧ, ಇದೊಂದು ದೇಶದ್ರೋಹಿ ಘಟನೆ, ಈ ವಿಚಾರದಲ್ಲಿ ಯಾವುದೇ ಮುಲಾಜಿಲ್ಲದೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು, ಕಾಂಗ್ರೆಸ್ ನವರು ಇದು, ಸುಳ್ಳು, ಇದನ್ನು ಎಡಿಟ್ ಮಾಡಲಾಗಿದೆ ಎಂದು ಹೇಳುತ್ತಿದೆ, ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸರ್ಕಾರ ಎಫಎಸ್ ಎಲ್ ತನಿಖೆ ಮಾಡಲಾಗುವುದು ಎಂದು ಹೇಳಿದೆ. ಆದರೆ, ಸರ್ಕಾರ ಪ್ರಭಾವ ಬೆಳೆಸಿ ಸಾಕ್ಷ್ಯಗಳನ್ನು ತಿರುಚಿ ಮುಚ್ಚಿ ಹಾಕುವ ಸಾಧ್ಯತೆ ಹೆಚ್ಚಿದ್ದು, ಕೂಡಲೇ ಎಫ್‌ಎಸ್‌ಎಲ್ ಬದಲು ಎನ್‌ಎಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಶಕ್ತಿ ಕೇಂದ್ರದಲ್ಲೇ ಪಾಕಿಸ್ತಾನ್ ಪರ ಘೋಷಣೆ ಕೂಗಿರುವುದು, ಸಹಿಸಲಾಗದ ಘಟನೆ, ನಮ್ಮ ನೆಲದಲ್ಲೇ ಇದ್ದು, ದೇಶದ್ರೋಹಿ ಹೇಳಿಕೆ ನೀಡುವುದು ಸರಿಯಲ್ಲ, ಅದು ನಾಸೀರ್ ಹುಸೇನ್ ಎದುರೇ ಈ ಘಟನೆ ನಡೆದಿದ್ದರೂ ಅದು ನನ್ನ ಗಮನಕ್ಕಿಲ್ಲ ಎನ್ನುವುದು ನಾಚಿಕೆಗೇಡಿನ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೂಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಸರ್ವಶೆಟ್ಟಿ, ಮುಖಂಡರಾದ ತಿಮ್ಮಪ್ಪ, ಓಬಳೇಶ್ ಇದ್ದರು.