ಹೊಸದಿಗಂತ ವರದಿ, ಬಳ್ಳಾರಿ:
ರಾಷ್ಟ್ರ ಓಡೆಯುವುದರಲ್ಲಿ ಕಾಂಗ್ರೆಸ್ ನವರು ನಿಸ್ಸೀಮರು, ಈ ಮನಸ್ಥಿತಿಯಿಂದ ಕಾಂಗ್ರೆಸ್ ನವರು ಹೊರ ಬರಬೇಕು, ಇಲ್ಲದಿದ್ದರೆ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡ್ತಿದ್ದಾರೆ ಎಂದು ಸoಸದ ಡಿ.ಕೆ.ಸುರೇಶ್ ನೀಡಿದ ಹೇಳಿಕೆಗೆ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಅವರು, ದಕ್ಷಿಣ ಭಾರತ, ಉತ್ತರ ಭಾರತ ಎಂದು ಬೇಧ ಭಾವ ಮಾಡುವುದು ಸರಿಯಲ್ಲ, ಬಹುಶಃ ಡಿ.ಕೆ.ಸುರೇಶ್ ಬಜೆಟ್ ಪ್ರತಿಗಳನ್ನು ಸರಿಯಾಗಿ ನೋಡಿಲ್ಲ ಅಂತ ಕಾಣಿಸುತ್ತೆ, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡತಾರೆ ಅಂದ್ರೆ, ಬೆಂಗಳೂರು ದುಡ್ಡನ್ನು ಅಭಿವೃದ್ದಿಗೆ ಬಳ್ಳಾರಿಗೆ ಕೊಡಬಾರದಾ, ಮಂಗಳೂರು ದುಡ್ಡನ್ನು ಬೆಂಗಳೂರಿಗೆ ಕೊಡಬಹುದು, ಎಲ್ಲಾದ್ರೂ ಕೊಡಬಹುದು, ಇದು ಅಕ್ಷರ ಶಹ: ದೇಶ ಒಡೆಯುವ ಮಾತು ಇದಾಗಿದೆ. ಈ ತರಹ ಹೇಳಿಕೆ ಸರಿಯಾದ ಕ್ರಮವಲ್ಲ, ಇದೆ ತರಹ ಮುಂದುವರೆದರೆ ಪ್ರತ್ಯೇಕ ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತೆ ಎಂದಿದ್ದು, ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.