ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿಯಲ್ಲಿರುವ ಗಟ್ಟಿಧ್ವನಿಯ ನಾಯಕರನ್ನೆಲ್ಲ ಮಟ್ಟ ಹಾಕುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ, ಮೊದಲು ಸಿಟಿ ರವಿಯವರನ್ನು ಟಾರ್ಗೆಟ್ ಮಾಡಿದರು, ನನ್ನ ಮೇಲೆ ಹಗೆ ತೀರಿಸಿಕೊಳ್ಳುವ ಪ್ರಯತ್ನ ನಡೆಯಿತು, ಈಗ ಎನ್ ರವಿಕುಮಾರ್ ಅವರನ್ನು ತೇಜೋವಧೆ ಮಾಡುವ ಪ್ರಯತ್ನ ನಡದಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಯಾವ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಾರೆಂದರೆ ಜನ ಅವರನ್ನು ಬೀದಿ ಬಸವ ಎನ್ನಲು ಶುರು ಮಾಡಿದ್ದಾರೆ, ಇನ್ನಾದರೂ ಅವರು ನಮ್ಮ ಪಕ್ಷದ ವಿರುದ್ಧ ಹಲ್ಲು ಮಸೆಯುವುದನ್ನು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ.