ಸೋಲುವ ಭಯದಲ್ಲಿ ಜನರನ್ನು ಯಾಮಾರಿಸೋಕೆ ಹೊರಟಿದೆ ಕಾಂಗ್ರೆಸ್ : ಸಿಎಂ ಬೊಮ್ಮಾಯಿ

ದಿಗಂತ ವರದಿ ವಿಜಯಪುರ:

ಸೋಲುವ ಭೀತಿಯಲ್ಲಿ ಕಾಂಗ್ರೆಸ್ ಇದ್ದು, ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ನಾಲತವಾಡ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಘೋಷಣೆ ಹಿನ್ನೆಲೆ ಇನ್ನೂ ನಾಲ್ಕು ಘೋಷಣೆ ಮಾಡಲಿ ಏನೂ ತೊಂದರೆ ಇಲ್ಲ. ಯಾವ್ಯಾವ ರಾಜ್ಯದಲ್ಲಿ ಏನೇನು ಘೋಷಣೆ ಮಾಡಿದ್ದಾರೆ ಟ್ರ್ಯಾಕ್ ರಿಕಾರ್ಡ್ ಇದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕರ್ನಾಟಕದಲ್ಲಿನ ಕೆಲಸಗಳನ್ನು ನೋಡಿ ಜನತೆ ತೀರ್ಮಾನ ಮಾಡುತ್ತಾರೆ ಎಂದರು.

ಅಲ್ಲದೇ, ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪಾಸಿಟಿವ್ ವಿಚಾರ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಕ್ಷೇತ್ರ ಬಗ್ಗೆ ಕಮೆಂಟ್ ಮಾಡಲ್ಲ. ಸಿದ್ದರಾಮಯ್ಯ ಹಿರಿಯ ನಾಯಕರು. ಅವರ ಮತಕ್ಷೇತ್ರದ ಬಗ್ಗೆ ಅವರೇ ತೀರ್ಮಾನ ಮಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!