ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಿಜೆಪಿಯ ಸಿದ್ಧಾಂತ ಮೆಚ್ಚಿ ದೋಮವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮತ್ತಷ್ಟು ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆತ್ಮೀಯವಾಗಿ ಬರಮಾಡಿಕೊಂಡರು.
ಟಿ.ನರಸೀಪುರದ ಡಾ. ರೇವಣ್ಣ, ಹೆಚ್.ಡಿ.ಕೋಟೆಯ ಕೃಷ್ಣಾ ನಾಯಕ್, ಉತ್ತರಕನ್ನಡದ ಶಶಿಭೂಷಣ್ ಹೆಗಡೆ, ರಾಮನಗರದ ಹನುಮಂತೇಗೌಡ, ರಾಜಣ್ಣ, ಮುದ್ದುಕೃಷ್ಣ, ನಾಗೇಶ್, ರೇಣುಕಾಪ್ರಸಾದ್, ಬೆಂಗಳೂರಿನ ಮುರಳೀಧರ್ ಲಕ್ಷ್ಮಣ್ ದಂಧಗಿ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು.