ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಮೇಲೆ ಶೇ.26 ರಷ್ಟು ಪರಸ್ಪರ ಸುಂಕವನ್ನು ವಿಧಿಸಿದ ನಂತರ ಕಾಂಗ್ರೆಸ್ ಸಂಸದರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಆವರಣದಲ್ಲಿರುವ ಮಕರ ದ್ವಾರದ ಬಳಿ ಅವರು ಪ್ರತಿಭಟನೆ ನಡೆಸಿದರು. ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಇತ್ತೀಚಿನ ವೀಸಾ ರದ್ದತಿ ಮತ್ತು ಭಾರತೀಯ ಸರಕುಗಳ ಮೇಲೆ ಶೇ.26 ರಷ್ಟು ಪರಸ್ಪರ ಸುಂಕವನ್ನು ವಿಧಿಸಿದ ಘಟನೆಗಳ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧಗಳು ಹದಗೆಡುತ್ತಿರುವ ಬಗ್ಗೆ ಚರ್ಚಿಸಲು ಇಂದು ಮುಂಜಾನೆ, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ನಿಲುವಳಿ ಸೂಚನೆಯನ್ನು ಮಂಡಿಸಲು ನೋಟಿಸ್ ನೀಡಿದರು.
ಕಾಂಗ್ರೆಸ್ ರಾಜ್ಯಸಭಾ ಸಂಸದರು ಸದನದಲ್ಲಿ ತುರ್ತು ಚರ್ಚೆಗಾಗಿ ಈ ವಿಷಯವನ್ನು ಪ್ರಸ್ತಾಪಿಸಲು ಅಧ್ಯಕ್ಷರಿಂದ ಅನುಮತಿ ಕೋರಿದ್ದಾರೆ.