ನುಡಿದಂತೆ ನಡೆಯುವುದು ಕಾಂಗ್ರೆಸ್ ಭರವಸೆ, ಸುಳ್ಳು ಹೇಳುವುದೇ ಬಿಜೆಪಿಯ ಭರವಸೆ: ಸತೀಶ್ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಜನಸ್ನೇಹಿ ಪಕ್ಷವಾಗಿದ್ದು, ಬಡವರ ಅಗತ್ಯಗಳನ್ನು ಆಧರಿಸಿ ಯೋಜನೆ ರೂಪಿಸಲಾಗಿದೆ. ನುಡುದಂತೆ ನಡೆಯುವುದು ನಮ್ಮ ಭರವಸೆಯಾಗಿದೆ. ಆದರೆ ಸುಳ್ಳು ಹೇಳುವುದೊಂದೇ ಬಿಜೆಪಿಯ ಭರವಸೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದರು.

ನಗರದ ಶ್ರೀ ಸಾಯಿ ನಿಲಯದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಗುರಿ, ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲ್ಲುವುದೊಂದೇ ನಮ್ಮ ಗುರಿಯೇ ಹೊರತು ಅವರು ಯಾವ ಪಕ್ಷದಿಂದ ಬಂದವರು ಎಂಬುದು ಪ್ರಶ್ನೆ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮನವರ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಪ್ರದೀಪ್ ಹಾಲ್ಗುಣಿ, ಡಿ.ಎಸ್.ನಾಯಕ, ಪರಗೌಡ ಖೇತಗೌಡರ, ಪಿ.ಬಿ.ಖೇತಗೌಡರ, ಶ್ರೀಶೈಲ ಅಂಗಡಿ, ಪ್ರಕಾಶ ಆದಪ್ಪಗೋಳ, ಡಾ.ಗಣಪತಿ ಕುಲಿಗೋಡ, ಡಾ.ಮಹಾಂತೇಶ ಕುಲಿಗೋಡ, ರಾಜಕುಮಾರ ನಾಯಿಕ, ಹಣಸಾಬ ನಾಯಿಕ, ದಿಲಾವರ್ ಎಲಿಗಾರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!