ಕೇಂದ್ರ ಸರ್ಕಾರದ‌ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಹೊಸದಿಗಂತ ವರದಿ ಬಾಗಲಕೋಟೆ :

ಕರ್ನಾಟಕ ರಾಜ್ಯ ಸರ್ಕಾರ ಹತ್ತು ಕೆ.ಜಿ‌ ಅಕ್ಕಿಯನ್ನು ಜನರಿಗೆ ನೀಡಲು ಉದ್ದೇಶಿಸಿದ್ದು, ಅಗತ್ಯ ಅಕ್ಕಿಯನ್ನು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡದ ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಡವರ ಜತೆ ಆಟ ಆಡುವುದನ್ನು ಕೇಂದ್ರ ಕೈಬಿಡಬೇಕು.‌ರಾಜ್ಯ ಸರ್ಕಾರ ಬಡವರ ಪರ ಜಾರಿಗೆ ತಂದ ಹತ್ತು ಕೆ.ಜಿ.ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರವನ್ನು ಕೇಳಿದರು ಅದನ್ನು ವಿತರಿಸದೇ ಬಡವರ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಕಲ್ಲು ಹಾಕುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಒಕ್ಕೂಟ ವ್ಯವಸ್ಥೆ ಇರುವ ಭಾರತದಲ್ಲಿ ಕರ್ನಾಟಕಕ್ಕೆ ಪ್ರಧಾನಿ ಯವರು ಅಕ್ಕಿ ನೀಡುತ್ತಿಲ್ಲ.‌ರಾಜ್ಯದ ಎಂಪಿಗಳು ಕೂಡ ರಾಜ್ಯ ಸರ್ಕಾರಕ್ಕೆ ಅಕ್ಕಿ ನೀಡಲು ಹಾಗೂ ಬಡವರ ಕಾರ್ಯಕ್ರಮ ತಡೆಯಬೇಡಿ ಎಂದು ನಿಯೋಗದೊಂದಿಗೆ ಹೋಗಿ‌ ಹೇಳುತ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಶಾಸಕ ಜೆ.ಟಿ.ಪಾಟೀಲ, ಎಚ್.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಮುಖಂಡರಾದ ಬಸವಪ್ರಭು ಸರನಾಡಗೌಡರ, ಅಜಯಕುಮಾರ ಸರನಾಯಕ,‌ಆನಂದ‌ ಜಿಗಜಿನ್ನಿ, ನಾಗರಾಜ ಹದ್ಲಿ, ಎಂ.ಬಿ.ಸೌದಾಗರ, ವೀಣಾ ಕಾಶಪ್ಪನವರ, ರಕ್ಷಿತಾ ಈಟಿ, ರೇಣುಕಾ ನ್ಯಾಮಗೌಡರ, ಬಾಯಕ್ಕ ಮೇಟಿ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯ ಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!