ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಒಟ್ಟು 12 ರಾಜ್ಯ, 75 ಜಿಲ್ಲೆ, 136 ದಿನಗಳ ಭಾರತ್ ಜೋಡೋ ಯಾತ್ರೆಯ ಬಳಿಕ ಈಗ ಎರಡನೇ ಯಾತ್ರೆಗೆ ಕಾಂಗ್ರೆಸ್ ಸಿದ್ಧವಾಗುತ್ತಿದೆಯೇ?
ಹೌದು ಎನ್ನುತ್ತಿವೆ ಪಕ್ಷದ ಮೂಲಗಳು.
ಇದೇ ಜನವರಿಯಿಂದ ಭಾರತ್ ಜೋಡೋ ಯಾತ್ರೆ 2.0 ದೇಶದ ಪೂರ್ವದಿಂದ ಪಶ್ಚಿಮಕ್ಕೆ ಸಾಗಲಿದೆ. ಈ ಯಾತ್ರೆಯಲ್ಲಿ ಈ ಬಾರಿ ರಾಹುಲ್ ಗಾಂಧಿಗೆ ಸಹೋದರಿ ಪ್ರಯಾಂಕಾ ಕೂಡಾ ಸಾಥ್ ನೀಡಲಿದ್ದಾರೆ. ಈ ಯಾತ್ರೆ ಜನವರಿ ಮೊದಲ ವಾರ ಆರಂಭವಾಗುವ ಸಾಧ್ಯತೆಯಿದ್ದು, ಲೋಕಸಭಾ ಚುನಾವಣೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಈ ಯಾತ್ರೆ ಅತ್ಯಂತ ವೇಗದಲ್ಲಿ ಪೂರ್ನಗೊಳ್ಳುವ ಸಾಧ್ಯತೆ ಇದೆ.
ಯಾತ್ರೆಯಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಅಥವಾ ಮತ್ತು ವಾಹನ ಬಳಬಹುದಾಗಿದೆ. ಆದರೆ ರಾಹುಲ್‌ಗಾಂಧಿ ಮಾತ್ರ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಲಿದ್ದಾರೆ ಎಂದಿವೆ ಮೂಲಗಳು.
ಈ ಮೊದಲಿನ ಭಾರತ್ ಜೋಡೋ ಯಾತ್ರೆ 2022ರ ಸೆಪ್ಟೆಂಬರ್ 7 ರಂದು ಆರಂಭವಾಗಿ ಜನವರಿ 30 ರಂದು ಕೊನೆಗೊಂಡಿತ್ತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾತ್ರೆ ಸಾಗಿತ್ತು.