ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಭಾರತ ಮಂಟಪದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಇಂದು ಈ ಸಮ್ಮೇಳನದ ಕೊನೆಯ ದಿನವಾಗಿದ್ದು, ನಿನ್ನೆ ರಾತ್ರಿಯಿಂದ ದೆಹಲಿ-ಎನ್ಸಿಆರ್ನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಭಾರತ ಮಂಟಪದ ಆವರಣವೂ ಮಳೆನೀರಿನಿಂದ ತುಂಬಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕಾಂಗ್ರೆಸ್ ವಿಡಿಯೋ ಹಂಚಿಕೊಂಡು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು..“ಪೊಳ್ಳು ಅಭಿವೃದ್ಧಿ ಬಹಿರಂಗವಾಗಿದೆ. ಜಿ-20 ಗಾಗಿ ಸಿದ್ದಪಡಿಸಿದ ಭಾರತ್ ಮಂಟಪಕ್ಕೆ ಹೂಡಿದ 2,700 ಕೋಟಿ ಹಣ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿದೆ” ಎಂದು ಬರೆದುಕೊಂಡಿದೆ.
खोखले विकास की पोल खुल गई
G20 के लिए भारत मंडपम तैयार किया गया। 2,700 करोड़ रुपए लगा दिए गए।
एक बारिश में पानी फिर गया… pic.twitter.com/jBaEZcOiv2
— Congress (@INCIndia) September 10, 2023