ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಜನಿವಾರಕ್ಕೆ ಕತ್ತರಿ ಬಿತ್ತು, ಶಿವದಾರ ಶಿವನ ಪಾದ ಸೇರಿಸಿದ್ರು. ಉಡುದಾರಕ್ಕೆ ಊರುಗೋಲಿಲ್ಲ, ಮುಂದೆ ತಾಳಿ ಭಾಗ್ಯನೇ ಇಲ್ಲದಂತೆ ಆಗುತ್ತೆ ಎಂದು ವಿಪಕ್ಷ ನಾಯಕ ಆರ್ .ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜನಿವಾರ ಕತ್ತರಿಸಿ ಬಿಸಾಕಿದ್ದಾರೆ. ಯಾವುದೋ ಒಂದು ಸೆಂಟಿಮೆಂಟ್ ಇರುತ್ತೆ. ಪರೀಕ್ಷೆ ಬರೆಯುವಾಗ ಮನಸ್ಸು ಉದ್ವೇಗದಲ್ಲಿರುತ್ತೆ. ಭಾವನೆಯನ್ನೇ ಕಿತ್ತು ಹಾಕ್ತಾರೆ ಅಂದ್ರೆ ಹೇಗೆ? ಮುಸ್ಲಿಂರಿಗೆ ಹಿಜಾಬ್ ತೆಗೆದಾಗ ಬಾಯಿ ಬಾಯಿ ಬಡಿದುಕೊಂಡ್ರು . ಇದು ನಾಲ್ಕು ಮೀಟರ್ ಬಟ್ಟೆನೂ ಅಲ್ಲ. ಕಾಂಗ್ರೆಸ್ ಸರ್ಕಾರ ಹಿಜಾಬ್ಗೆ ಬಹುಪರಾಕ್ ಹಾಕ್ತಿದ್ದಾರೆ. ಇದು ಷರಿಯತ್ ಕಾನೂನು ಅಂಬೇಡ್ಕರ್ ಸಂವಿಧಾನದ ಪ್ರಕಾರ ಇರುವ ಸರ್ಕಾರವಲ್ಲ ಎಂದರು.
ದಾರದಲ್ಲಿ ಯಾರಾದರು ಕಾಪಿ ಹೊಡೀತಾರಾ? ಜನಿವಾರದಲ್ಲಿ ಕಾಪಿ ಹೆಂಗ್ರಿ ಹೊಡೀತಾರೆ? ಶಿವನದಾರ ಏನ್ರಿ ಮಾಡಿತ್ತು ನಿಮಗೆ? ರಾಮ, ಸೀತೆ, ಆಂಜನೇಯ ಕಂಡ್ರೂ ಇವರಿಗೆ ಆಗಲ್ಲ. ಕಾಂಗ್ರೆಸ್ ಇದ್ದಾಗಲೇ ಇದೆಲ್ಲಾ ಆಗಿರೋದು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.