ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುವುದು ಕಾಂಗ್ರೆಸ್ ಕೆಲಸ: ಕುಮಾರಸ್ವಾಮಿ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿನ ಕಾಂಗ್ರೆಸ್ ನವರು ಆಸ್ತಿ ಪಾಸ್ತಿ ಮಾರಿ ಪಕ್ಷ ಕಟ್ಟಿದ್ದರು. ಆದರೆ ಈಗಿನವರು ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ್ನು ಮುಗಿಸುವುದೇ ಇವರ ಉದ್ದೇಶ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಳುಗಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಶಾಪ ಹಾಕಿದ್ದಾರೆ.ಅವರ ಶಾಪವೇ ಆಶಿರ್ವಾದ ಎಂದು ಭಾವಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವೇಗೌಡರು ವಿರೋಧಿಗಳಿಗೂ ಶಾಪ ಹಾಕಿದವರಲ್ಲ. ಹೀಗಿರುವಾಗ ಇಂತಹ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನವರ ನಡವಳಿಕೆಯನ್ನು ನಾಡಿನ ಜನ ಸಮಾಪ್ತಿ ಮಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಗಾಂಧಿ ಕಟ್ಟಿದ ಕಾಂಗ್ರೆಸ್ ಪಕ್ಷ. 135 ವರ್ಷಗಳ ಇತಿಹಾಸವಿರುವ ಪಕ್ಷ ನಮ್ಮದು ಎಂದಿದ್ದಾರೆ. ಆದರೆ ಗಾಂಧಿ ಕಟ್ಟಿದ ಕಾಂಗ್ರೆಸ್ ನ ಆಗಿನ ಇತಿಹಾಸ ಬೇರೆ. ಈಗ ಈಸ್ಟ್ ಇಂಡಿಯಾ ಕಂಪನಿ ತರ ದರೋಡೆ ಕಾಂಗ್ರೆಸ್ ಆಗಿದೆ. ಹಿಂದಿನ ಕಾಂಗ್ರೆಸ್ ನವರು ಆಸ್ತಿ ಪಾಸ್ತಿ ಮಾರಿ ಪಕ್ಷ ಕಟ್ಟಿದ್ದರು. ಆದರೆ ಈಗಿನವರು ಈಸ್ಟ್ ಇಂಡಿಯಾ ಕಂಪನಿ ತರ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!