ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿನ ನೀರಿನ ಬಿಕ್ಕಟ್ಟನ್ನು ಎತ್ತಿ ಹಿಡಿಯಲು ಎಎಪಿ ನೇತೃತ್ವದ ದೆಹಲಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ದೆಹಲಿಯ ಕೃಷ್ಣಾನಗರ ಪ್ರದೇಶದಲ್ಲಿ ‘ಮಟ್ಕಾ ಫೋಡ್’ ಪ್ರತಿಭಟನೆ ನಡೆಸಿದರು.
ನೀರಿನ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡಲಾಗುತ್ತಿದೆ, ಬಡವರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಗಳು ಆರೋಪದ ಆಟ ಆಡುತ್ತಿವೆ. ಮೊದಲೇ ನೀರಿನ ವ್ಯವಸ್ಥೆ ಮಾಡಲಿಲ್ಲ ಏಕೆ? ರಾಜಕೀಯ ಮಾಡುವುದರಲ್ಲಿ ನಿರತರಾಗಿದ್ದರು. ಟ್ಯಾಂಕರ್ ಮಾಫಿಯಾದೊಂದಿಗೆ ಸೇರಿಕೊಂಡಿರುವ ಕಿವುಡ ಮತ್ತು ಮೂಗ ಸರ್ಕಾರವನ್ನು ಎಬ್ಬಿಸಲು ದೆಹಲಿಯಲ್ಲಿ ‘ಮಟ್ಕಾ ಫೋಡ್’ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ದೆಹಲಿಯ ಮೂಲೆ ಮೂಲೆಯಲ್ಲಿ ಮಟ್ಕಾ ಒಡೆಯಲಾಗುವುದು ಮತ್ತು ನಿದ್ದೆಯಲ್ಲಿರುವ ಸರ್ಕಾರವನ್ನು ಜಾಗೃತಗೊಳಿಸಲಾಗುವುದು ಎಂದು ಕಾಂಗ್ರೆಸ್ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು.