ದಿಗಂತ ವರದಿ ಚಿಕ್ಕೋಡಿ:
ಚಿಕ್ಕೋಡಿ- ರಾಜ್ಯಪಾಲರ ಭಾಷಣದ ಮೆಲೆ ಹಾಗು ಬಜೇಟ್ ರಾಜ್ಯದ ಅಭಿವೃದ್ಧಿ ವಿಷಯವಾಗಿ ನಡೆಯಬೇಕಿದ್ದ 10 ದಿನದ ಕಲಾಪವನ್ನು ಕಾಂಗ್ರೆಸ್ ಪಕ್ಷ ವ್ಯರ್ಥಮಾಡಿದೆ ಎಂದು ಆದಿಜಾಂಬವ ನಿಗಮ ಮಂಡಳಿ ಅದ್ಯಕ್ಷ ಹಾಗು ರಾಯಭಾಗ ಬಿ.ಜೆ.ಪಿ ಶಾಸಕ ದುರ್ಯೋಧನ ಐಹೊಳೆ ಕಿಡಿಕಾರಿದರು.
ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ವಿಧಾನ ಸಭೆ ಅಧಿವೇಷನದಲ್ಲಿ ರಾಜದಯದ ಮೂಲೆ ಮೂಲೆಯಿಂದ ಶಾಸಕರು ತಮ್ಮ ಅಭಿವೃದ್ಧಿ ಚರ್ಚೆಗೆ ಕಲಾಪದಲ್ಲಿ ಪಾಲ್ಗೊಳ್ಳಲು ಬಂದಿರುತ್ತಾರೆ. ಆದರೆ ಈ ಕಾಂಗ್ರೆಸನ ಶಾಸಕರು, ವಿಪಕ್ಷ ನಾಯಕರು ರಾಷ್ಟ ದ್ವಜ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ದೇಶದ ತ್ರಿವರ್ಣ ಧ್ವಜಕ್ಕೆ ಅಪಮಾನ ಎಸಗಿದ್ದಾರೆ ಎಂದರು.
ಕೇಂದ್ರದ ವಿರೋಧ ಪಕ್ಷದ ಸ್ಥಾನವನ್ನು ಸಿಗದೆ, ಒಂದೋಂದಾಗಿ ರಾಜ್ಯದ ಕಾಂಗ್ರೇಸ್ ಕಳೆದುಕೊಳ್ಳುತ್ತಿದೆ ಹೀಗಾಗಿ ಅಭಿವೃದ್ಧಿಗೆ ವಿರೋಧಿಸಿ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಬಂಡವಾಳ ಇಲ್ಲದೆ ಇರುವದರಿಂದ ಜನರ ಮುಂದೆ ದೊಂಬರಾಟ ನಡೆಸಿದ್ದಾರೆ. ಮುಂಬರುವ 2013 ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕ ಪಾಠ ಕಲಿಸಲಿದೆ ರಂದು ಶಾಸಕ ದುರ್ಯೋಧನ ಐಹೊಳೆ ಎಂದರು. ರಾಯಭಾಗ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ರಾಜು ಹರಗನ್ನವರ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪುರೆ ಇದ್ದರು.