ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರಕಾರದ ಜಾತಿಗಣತಿ ನಿರ್ಧಾರಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದು, ಸಿದ್ದರಾಮಯ್ಯನವರೇ ನಿಮ್ಮನೆಗೆ ಜಾತಿಗಣತಿ ಸಮೀಕ್ಷೆ ಮಾಡಲು ಯಾರು ಬಂದಿದ್ರು? ಬೆಂಗಳೂರಿನ ಎಸಿ ಕಚೇರಿಯಲ್ಲಿ ಕುಳಿತು ಕೇವಲ ನಮ್ಮನ್ನು ಒಡಕು ಮೂಡಿಸುವ ಷಡ್ಯಂತ್ರ‍್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿಯನ್ನು ನಾವು ಒಪ್ಪೋದಿಲ್ಲ, ವಿರೋಧ ಮಾಡುತ್ತೇವೆ. ಜಾತಿ ಜನಗಣತಿ ನಮ್ಮೆಲ್ಲರನ್ನು ಒಡೆದು ಆಳುವ ನೀತಿ. ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವಂತಹ ಷಡ್ಯಂತ್ರ‍್ಯವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಜಾತಿ ಜನಗಣತಿ ಮಾಡೋಕೆ ರಾಜ್ಯ ಸರ್ಕಾರಕ್ಕೆ ಅಧಿಕಾರನೇ ಇಲ್ಲ. ಅದನ್ನು ಕೇಂದ್ರ ಸರ್ಕಾರ ಮಾಡಬೇಕು. ಇದರ ಹೊರತಾಗಿಯೂ ಜಾತಿ ಸಮೀಕ್ಷೆ ಮಾಡಿ ಕೆಲ ಜಾತಿಗಳನ್ನು ಕಡಿಮೆ ತೋರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು .