ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡನ ಕಿರುಕುಳದಿಂದ ನೊಂದು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯರನ್ನು ರಕ್ಷಿಸಲು ಕಾಲುವೆಗೆ ಹಾರಿದ್ದ ಪೊಲೀಸ್ ಕಾನ್ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದು, ಮಹಿಳೆ ಸುರಕ್ಷಿತವಾಗಿ ಹೊರಬಂದಿದ್ದಾಳೆ.
ಈ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಮಹಿಳೆ ಗಂಡನ ಜತೆ ಜಗಳವಾಡಿ ಬಂದು ಹಿಂಡನ್ ಕಾಲುವೆಗೆ ಹಾಕಿದ್ದಾಳೆ, ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೆಬಲ್ ಅಂಕಿತ್ ತೋಮರ್ ಏನನ್ನೂ ಲೆಕ್ಕಿಸದೆ ಕಾಲುವೆಗೆ ಹಾರಿದ್ದಾರೆ.
ವೈಶಾಲಿ ಸೆಕ್ಟರ್ 2 ರ ನಿವಾಸಿಯಾಗಿರುವ ಆರತಿ, ತನ್ನ ಪತಿ ಆದಿತ್ಯ ಜೊತೆಗಿನ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ. ತೋಮರ್ ನೀರಿಗೆ ಹಾರಿದ ತಕ್ಷಣ ಅಲ್ಲಿ ಓಡಾಡುತ್ತಿದ್ದ ಜನರ ಪೈಕಿ ಕೆಲವರು ಕೂಡ ಕಾಲುವೆಗೆ ಜಿಗಿದು ಮಹಿಳೆಯನ್ನು ರಕ್ಷಿಸಿದ್ದಾರೆ. ಕೂಡಲೇ ತೋಮರ್ ಅವರನ್ನು ಹೊರಗೆ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.