Wednesday, December 24, 2025

ಬಂಗಾಳದ ಸಿಲಿಗುರಿಯಲ್ಲಿ ದೊಡ್ಡ ‘ಮಹಾಕಾಲ’ ದೇವಸ್ಥಾನ ನಿರ್ಮಾಣ: ಸಿಎಂ ಮಮತಾ ಬ್ಯಾನರ್ಜಿ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಸಿಲಿಗುರಿಯಲ್ಲಿ ದೊಡ್ಡ ‘ಮಹಾಕಾಲ’ ದೇವಸ್ಥಾನವನ್ನು ನಿರ್ಮಿಸಲಾಗುವುದು ಮತ್ತು ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಸಿಲಿಗುರಿಯಲ್ಲಿ ಪ್ರಸ್ತಾವಿತ ಸಮಾವೇಶ ಕೇಂದ್ರದ ಬಳಿ ದೊಡ್ಡ ಮಹಾಕಾಲ ದೇವಸ್ಥಾನ ತಲೆ ಎತ್ತಲಿದೆ. ಇದಕ್ಕಾಗಿ ಟ್ರಸ್ಟ್ ಅನ್ನು ರಚಿಸಬೇಕಾಗಿದೆ ಎಂದು ಡಾರ್ಜಿಲಿಂಗ್‌ನ ಮಹಾಕಾಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಮತಾ ಬ್ಯಾನರ್ಜಿ ತಿಳಿಸಿದರು.

ದಿಘಾದಲ್ಲಿ ಜಗನ್ನಾಥ ದೇವಾಲಯವನ್ನು ಸ್ಥಾಪಿಸಿದ ಕೀರ್ತಿಯೂ ಮಮತಾ ಬ್ಯಾನರ್ಜಿ ಅವರಿಗೆ ಸಲ್ಲುತ್ತದೆ. ದೇವಾಲಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಲಿದೆ, ಆದರೆ ದೇವಾಲಯ ನಿರ್ಮಾಣಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

error: Content is protected !!