ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಹಾಲು ದರ ಏರಿಕೆ ಎಫೆಕ್ಟ್ ನಿಂದ ಟೀ, ಕಾಫಿ ದರ ಕೂಡ ಏರಿಕೆಯಾಗಿದೆ. ಟೀ ಅಂಗಡಿ ಮುಂದೆ ದರ ಏರಿಕೆ ಬೋರ್ಡ್ ಅಳವಡಿಕೆ ಮಾಡಲಾಗಿದೆ.
ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ 5 ರಿಂದ 10 ರೂಪಾಯಿವರೆಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟು ಹೋಟೆಲ್ ಗಳು ಬೆಲೆ ಏರಿಕೆ ಮಾಡಿದೆ. ಹೀಗಾಗಿ ಜನ ನಮ್ಮ ಜೇಬಿಗೆ ಕತ್ತರಿ ಹಾಕ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹೋಟೆಲ್ ಗಳ ಮುಂದೆ ಹಾಲು, ಕಾಫಿ, ಹಾಗೂ ಟೀ ಪುಡಿ ಹೆಚ್ಚಳದಿಂದ ದರ ಏರಿಕೆ ಮಾಡಲಾಗಿದೆ. ಹೀಗಾಗಿ ಗ್ರಾಹಕರು ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಎಂದು ಬೋರ್ಡ್ ಹಾಕಿದ್ದು ಸಹ ಕಂಡುಬಂದಿದೆ.