ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರ ಸಂಘಟನೆ ಐಎಸ್‌ಐಎಸ್ ಜೊತೆಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಅಲೀಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನನ್ನು ಎನ್‌ಐಎ ಬಂಧಿಸಿದೆ.
ಜಾರ್ಖಂಡ್‌ನಲ್ಲಿರುವ ವಿದ್ಯಾರ್ಥಿಯ ನಿವಾಸ ಹಾಗೂ ಉತ್ತರ ಪ್ರದೇಶದಲ್ಲಿದ್ದ ತಾಯಿ ಬಾಡಿಗೆ ಮನೆಯ ತಪಾಸಣೆ ನಡೆಸಿದ ನಂತರ ಫೈಜರ್ ಅನ್ಸಾರಿ ಎಂಬ ವಿದ್ಯಾರ್ಥಿಯನ್ನು ಎನ್‌ಐಎ ಬಂಧಿಸಿದೆ.
ತನಿಖೆ ಆರಂಭವಾಗಿದ್ದು, ಅನ್ಸಾರಿ ಮತ್ತು ಅವರ ಸಹಚರರು ಐಸಿಸ್‌ಗೆ ತಮ್ಮ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದರು ಎನ್ನುವ ಮಾಹಿತಿ ತಿಳಿದಿದೆ.