ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ಕಂಟೈನರ್‌ಗಳನ್ನು ರಸ್ತೆಯ ಮೇಲೆ ನಿಲ್ಲಿಸಲಾಗಿದೆ. ಅವುಗಳಲ್ಲಿ ನೂರಾರು ಕೋಟಿ ರೂಪಾಯಿ ಇದೆ ಈ ವಿಷಯ ತಿಳಿದ ಸ್ಥಳೀಯರು ಗುಂಪು ಗುಂಪಾಗಿ ರಸ್ತೆಗಿಳಿದಿದ್ದರು. ತಮಿಳುನಾಡಿನಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ಆರ್‌ಬಿಐನ ಚೆನ್ನೈ ಶಾಖೆಯು 1,070 ಕೋಟಿ ರೂ.ಗಳನ್ನು ಎರಡು ಟ್ರಕ್‌ಗಳಲ್ಲಿ ವಿಲ್ಲುಪುರಂಗೆ ಕಳುಹಿಸಿದೆ. ಈ ಕರೆನ್ಸಿಯ ಬಂಡಲ್‌ಗಳೊಂದಿಗೆ ಎರಡು ಟ್ರಕ್‌ಗಳು ವಿಲ್ಲುಪುರಂಗೆ ಹೊರಟಿವೆ. ಈ ಘಟನೆಯಲ್ಲಿ ಟ್ರಕ್‌ಗಳು ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯ ತಾಂಬರಂ ಸ್ಯಾನಿಟೋರಿಯಂ ಬಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಿದ್ಧಾ ಬಳಿ ರಸ್ತೆಯಲ್ಲಿ ಹಠಾತ್ ನಿಂತಿವೆ. ವಿಲ್ಲುಪುರಂನಿಂದ ಜಿಲ್ಲೆಯ ಬ್ಯಾಂಕ್‌ಗಳಿಗೆ ಕರೆನ್ಸಿ ವಿತರಿಸಲು ಮುಂದಾದಾಗ ಈ ಘಟನೆ ನಡೆದಿದೆ. ವಿಷಯ ತಿಳಿದ ಜನ ಸಾಲು ಸಾಲಾಗಿ ಬರತೊಡಗಿದರು ಆದರೆ, ಅವರ ಆಸೆಗೆ ತಣ್ಣೀರೆರಿಚಿದಂತೆ ಭಾರೀ ಭದ್ರತೆಯಿದ್ದರಿಂದ ಬಂದ ದಾರಿಗೆ ಸುಂಕವಿಲ್ಲದಂತೆ ಎಲ್ಲರೂ ವಾಪಸಾಗಿದ್ದಾರೆ.
ಒಂದು ಟ್ರಕ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದ ಎರಡು ಟ್ರಕ್‌ಗಳು ತಾಂಬರಂನಲ್ಲಿ ನಿಂತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಇವುಗಳಿಗೆ 17 ಪೊಲೀಸರು ಕಾವಲು ಕಾಯುತ್ತಿದ್ದಾರೆ. 535 ಕೋಟಿ ರೂಪಾಯಿ ಕರೆನ್ಸಿ ಸಾಗಿಸುತ್ತಿದ್ದ ಟ್ರಕ್ ನಿಲ್ಲಿಸಿರುವ ಮಾಹಿತಿ ಕ್ರೋಮ್ ಪೇಟ್ ಪೊಲೀಸರಿಗೆ ಲಭಿಸಿದೆ. ಅಧಿಕಾರಿಗಳು ಬೆಚ್ಚಿಬಿದ್ದು, ತಕ್ಷಣ ಕ್ರೋಂಪೇಟ ಪೊಲೀಸರಿಗೆ ಮಾಹಿತಿ ನೀಡಿ ಭದ್ರತೆ ಒದಗಿಸಿದರು. ಟ್ರಕ್‌ಗಳನ್ನು ತಾಂಬರಂನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸಿದ್ದಾ ಆವರಣಕ್ಕೆ ಸ್ಥಳಾಂತರಿಸಲಾಯಿತು.
ತಾಂಬರಂ ಸಹಾಯಕ ಪೊಲೀಸ್ ಕಮಿಷನರ್ ಶ್ರೀನಿವಾಸನ್ ಮತ್ತು ಅವರ ತಂಡ ಭದ್ರತೆಯ ಮೇಲ್ವಿಚಾರಣೆ ನಡೆಸಿತು. ಯಾವುದೇ ತೊಂದರೆಯಾಗದಂತೆ ಲಾರಿಯನ್ನು ಸುರಕ್ಷಿತವಾಗಿ ಅಲ್ಲಿಂದ ರವಾನಿಸಲಾಯಿತು. ಮೆಕ್ಯಾನಿಕ್‌ಗಳು ಒಂದು ಟ್ರಕ್‌ನಲ್ಲಿ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗದ ಕಾರಣ, ಅದನ್ನು ಚೆನ್ನೈನಲ್ಲಿರುವ ಆರ್‌ಬಿಐಗೆ ಹಿಂತಿರುಗಿಸಲಾಯಿತು.