ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೀ ಮಾತಿನಲ್ಲಿ ಒಬ್ಬರಿಗೊಬ್ಬರು ಬಿಗ್‌ಬಾಸ್‌ನಲ್ಲಿ ಹೊಡೆದುಕೊಳ್ಳೋದು ಹೊಸ ವಿಷಯ ಅಲ್ಲ, ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಚಪ್ಪಲಿಯಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ.
ಹಿಂದಿ ಬಿಗ್‌ಬಾಸ್‌ನ ಫೇಮಸ್ ಕಂಟೆಸ್ಟೆಂಟ್ಸ್ ಅಂಕಿತಾ ಲೋಖಂಡೆ ಹಾಗೂ ವಿಕ್ಕಿ ಜೈನ್ ಮಧ್ಯೆ ಆಗಾಗ ಜಗಳ ಆಗುತ್ತಲೇ ಇರುತ್ತದೆ. ಮನೆಯಲ್ಲಿ ಊಟದ ವಿಷಯವಾಗಿ ಮಾತುಕತೆ ಆಗುವ ವೇಳೆ ವಿಕ್ಕಿ ತಮಾಷೆಗೆ ಅಂಕಿತಾ ಕುತ್ತಿಗೆ ಎಳೆಯುತ್ತಾರೆ.
ಇದು ಅಂಕಿತಾಗೆ ಇಷ್ಟವಾಗದೇ ಮಲಗಿದ್ದ ವಿಕ್ಕಿ ಮೇಲೆ ಚಪ್ಪಲಿ ಎಸೆದು ಹೊಡೆದಿದ್ದಾರೆ. ತಮಾಷೆಯಾಗಿ ದೃಶ್ಯ ಕಾಣಿಸಿದರೂ ಬಿಗ್‌ಬಾಸ್ ಯಾವ ಮಟ್ಟಕ್ಕೆ ಬಂದು ನಿಂತಿದೆ ಎಂದು ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.