ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ತಾಯಿಯ ಆಶೀರ್ವಾದವಿಲ್ಲದೆ ಸ್ಪರ್ಧಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ ಎಂದು ಪ್ರಧಾನಿ ಮೋದಿ ಕಣ್ಣೀರಾಗಿದ್ದಾರೆ.
ಇದು ಕೇವಲ ನನ್ನ ತಾಯಿಯ ಬಗ್ಗೆ ಮಾತ್ರವಲ್ಲ, ನನ್ನ ತಾಯಿ ನನಗೆ ಜನ್ಮ ನೀಡಿದ್ದಾಳೆ. ಆದರೆ ನಾನು ಅವಳಿಗೆ ನ್ಯಾಯ ನೀಡಲಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾಳೆ. ಆದರೆ ನಾನು ಆಕೆಯ ಕನಸುಗಳನ್ನು ಪೂರ್ತಿಗೊಳಿಸಿಲ್ಲ. ನಾನು ಸಣ್ಣ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಾಯಿಯನ್ನು ಕಳೆದುಕೊಂಡು ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಮಾತನಾಡಿದ ಮೋದಿ, ತಾಯಿಯ ಪಾದವನ್ನು ಮುಟ್ಟಿಯೇ ನಾನು ಎಲ್ಲಾ ನಾಮಪತ್ರಗಳನ್ನು ಸಲ್ಲಿಸಿದ್ದೇನೆ. ಅವರು ನನಗೆ ಬೆಲ್ಲ ತಿನ್ನಿಸುತ್ತಿದ್ದರು. ಆದರೆ ತಾಯಿಯನ್ನು ಕಳೆದುಕೊಂಡು ಸ್ಪರ್ಧಿಸುತ್ತಿರುವ ಮೊದಲ ಚುನಾವಣೆಯಾಗಿದೆ. ತಾಯಿಯ ಪಾದವನ್ನು ಮುಟ್ಟದೆ ನಾಮಪತ್ರ ಸಲ್ಲಿಸಿದ್ದೇನೆ ಎಂದಿದ್ದಾರೆ.
BHARATHA MATEYE NIMMA TAYI. AVARA ASIRVADA YAVAGALU NIMMA MALE IRUTTADE. JI MODI