ಕರಾವಳಿಯಲ್ಲಿ ಮುಂದುವರಿದ ಮಳೆ ಅವಘಡ: ಕಣ್ಣೆದುರೇ ಕುಸಿಯಿತು ತಡೆಗೋಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಳೆಯ ಆರ್ಭಟಕ್ಕೆ ಮನೆಯೊಂದರ ತಡೆಗೋಡೆ ಕುಸಿತವಾಗಿ ಸಂಭಾವ್ಯ ಅಪಾಯ ತಪ್ಪಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಕ್ತೇಶ್ವರಿ‌ ವಠಾರದ ಲಿಂಗದಗುಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ.

ಶಶಿಕಾಂತ್ ರಾವ್ ಎಂಬವರಿಗೆ ಸೇರಿದ ತಡೆಗೋಡೆ ಕುಸಿತವಾಗಿದ್ದು, ದುರ್ಘಟನೆ ನಡೆದ ಸಂದರ್ಭದಲ್ಲಿ ಆಸುಪಾಸಿನಲ್ಲಿ ಯಾರು ಇಲ್ಲದೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ತಡೆಗೋಡೆ ಕುಸಿತದ ರಭಸಕ್ಕೆ ಮೂರು ಮನೆಗಳು ಅಪಾಯದಲ್ಲಿವೆ.

ತಡೆಗೋಡೆ ಕುಸಿತ ಪ್ರದೇಶಕ್ಕೆ ನಗರಸಭೆಯ ಸದಸ್ಯ ದಿನೇಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!