ಜನನ ಪ್ರಮಾಣದಲ್ಲಿ ಸತತ ಇಳಿಕೆ, ಹೆಚ್ಚುತ್ತಿರುವ ವೃದ್ಧರ ಸಂಖ್ಯೆ: ಜಪಾನ್ ಸರ್ಕಾರಕ್ಕೆ ಈಗ ಹೊಸ ಸವಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ಬೆಳವಣಿಗೆಯೊಂದರಲ್ಲಿ ಜಪಾನ್ ದೇಶದ ಜನನ ಪ್ರಮಾಣ ನಿರೀಕ್ಷೆಗಿಂತಲೂ ವೇಗವಾಗಿ ಕುಸಿತ ಕಾಣುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರ ಬಿಡುಗಡೆ ಮಾಡಿರುವ ವರದಿಗಳಲ್ಲಿ ಈ ಅಂಕಿ ಅಂಶ ಸ್ಪಷ್ಟವಾಗಿದ್ದು, ಕುಸಿಯುತ್ತಿರುವ ಜನನ ಪ್ರಮಾಣ ಹಾಗೂ ಹೆಚ್ಚುತ್ತಿರುವ ವೃದ್ಧರ ಸಂಖ್ಯೆ ಜಪಾನ್‌ಗೆ ಹೊಸ ಸವಾಲಾಗಿ ನಿಂತಿದೆ.
2023ಕ್ಕೆ ಹೋಲಿಸಿದರೆ ಜನನ ಪ್ರಮಾಣ ಶೇಕಡ 5.7ರಷ್ಟು ಕುಸಿತವಾಗಿದ್ದು, 2024ರಲ್ಲಿ ದೇಶದಲ್ಲಿ 6,86,061 ಶಿಶುಗಳು ಮಾತ್ರ ಜನಿಸಿವೆ. 1899ರ ಬಳಿಕ ಇದೇ ಮೊದಲಿಗೆ ವರ್ಷವೊಂದರಲ್ಲಿ 7 ಲಕ್ಷಕ್ಕಿಂತ ಕಡಿಮೆ ಶಿಶುಗಳು ಜನಿಸಿವೆ ಎಂಬುದು ಅಂಕಿಅಂಶಗಳಲ್ಲಿ ಸ್ಪಷ್ಟವಾಗುತ್ತಿದೆ.
ಈ ಬೆಳವಣಿಗೆಯ ಬಗ್ಗೆ ಪ್ರಧಾನಿ ಶಿಗೆರು ಇಶಿಬಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ವಿವಾಹಿತರಿಗೆ ಅನುಕೂಲವಾಗುವಂತೆ ಕೆಲಸದ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸದ್ಯ ಜಪಾನ್‌ನಲ್ಲಿ 12.40 ಕೋಟಿ ಜನಸಂಖ್ಯೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!