ಹೊಸದಿಗಂತ ವರದಿ,ಧಾರವಾಡ:
ನಿರಂತರ ಸುರಿಯುವ ಮಳೆಯಿಂದ ಮನೆ ಕುಸಿದು, ಮೂವರು ಗಂಭೀರ ಗಾಯಗೊಂಡ ಶುಕ್ರವಾರ ಘಟನೆಯು ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.
ಏಕಾಏಕಿ ಮನೆ ಗೋಡೆ ಕುಸಿದು, ಮನೆಯ ಪಕ್ಕದಲ್ಲಿ ಜೋಪಡಿಯಲ್ಲಿ ವಾಸವಿದ್ದ ಕುಟುಂಬದ ಸದಸ್ಯರು ಗಾಯಗೊಂಡಿದ್ದು, ಅವನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಲ್ಲಪ್ಪ ಇಪ್ಪಿಯವರ (40) ಹನುಮವ್ವ ಇಪ್ಪಿಯವರ (35) ಯಲ್ಲಕ್ಕ ಇಪ್ಪಿಯವರ(30) ಗಾಯಗೊಂಡಿದ್ದಾರೆ.