ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೀದರ್‌ನಲ್ಲಿ ಸಚಿನ್ (26 ವರ್ಷ) ಎಂಬ ಗುತ್ತಿಗೆದಾರ ಅತ್ಮಹತ್ಯೆಗೆ ಶರಣಾಗಿದ್ದಾರೆ. 7 ಪುಟಗಳ ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಡೆತ್ ನೋಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಜೀವ ಬೆದರಿಕೆ ಹಾಕಿರುವುದಾಗಿ ಉಲ್ಲೇಖಿಸಿದ್ದಾರೆ. ಈ ಪ್ರಕರಣಕ್ಕೆ ಕುರಿತು ರಾಜು ಕಪನೂರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸಚಿನ್ ನಮಗೆ ಪರಿಚಯಸ್ಥ, ಟೆಂಡರ್ ಹಾಕೋದಾಗಿ ನಮ್ಮ ಹತ್ರ 87 ಲಕ್ಷ ಹಣ ಪಡೆದಿದ್ದಾನೆ. ಟೆಂಡರ್ ಹಾಕದೆ ಹಣ ಕೊಡದೇ ಮೋಸ ಮಾಡಿದ್ದಾನೆ. ಈಗಾಗಲೇ ಈ ಬಗ್ಗೆ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಆತನ ವಿರುದ್ಧ ಅರ್ಜಿ ಕೊಟ್ಟಿದ್ದೇವೆ ಎಂದರು.
ಅಲ್ಲದೆ ಸೋಲಾಪುರದಲ್ಲಿ ಹಣ ಕೊಟ್ಟವರು ಅಲ್ಲೂ ಪೊಲೀಸ್ ಠಾಣೆಯಲ್ಲಿ ಒಂದು ತಿಂಗಳ ಹಿಂದೆ ಹಣ ಕೊಟ್ಟವರು ಅರ್ಜಿ ಸಲ್ಲಿಸಿದ್ದಾರೆ. ಒಂದು ತಿಂಗಳ ಹಿಂದೆ ಹಣ ತರೋದಾಗಿ ಹೇಳಿ ಹೋಗಿದ್ದಾನೆ. ಸಚಿನ್ ಗೆ ನಾವು ಟಾರ್ಚರ್ ಮಾಡಿಲ್ಲ. ಆತನೇ ನನಗೆ ಮತ್ತು ನಮ್ಮ ಸ್ನೇಹಿತರಿಗೆ ಟೆಂಡರ್ ಹಾಕಿದಿನಿ ಅಂತ ಹೇಳಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿದರು.
ಮೃತ ಸಚಿನ್ ಅವರು, ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬುವವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ ಮೃತ ಸಚಿನ್ ಅವರಿಂದ ಇನ್ನೂ 1 ಕೋಟಿ ಹಣ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಮಾತ್ರವಲ್ಲ ರಾಜು ಕಪನೂರು ಸೇರಿ ಇನ್ನೂ ನಾಲ್ವರು ಸೇರಿಕೊಂಡು ಕೊಲೆ ಬೆದರಿಕೆ ಹಾಕಿದ್ದರು ಎಂದು 7 ಪುಟಗಳ ವಿಸ್ತಾರವಾದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ನಡುವೆ ರೈಲ್ವೇ ಹಳಿಯ ಬಳಿ ಮೃತ ಸಚಿನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿಗೆ ಕಾರಣರಾದವರು ಸ್ಥಳಕ್ಕೆ ಬರಬೇಕೆಂದು ಸಂಬಂಧಿಕರು ಒತ್ತಾಯ ಮಾಡಿದ್ದಾರೆ.