ಲೋಕಸಭೆ ಚುನಾವಣೆ ಮುನ್ನಲ್ಲೇ ಬಿಹಾರದಲ್ಲಿ ತಲೆಯೆತ್ತಿದ ವಿವಾದಾತ್ಮಕ ಪೋಸ್ಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಹಾರದಲ್ಲಿ 2024ರ ಲೋಕಸಭೆ ಚುನಾವಣೆಯನ್ನು ರಾಮಯಣ ಮತ್ತು ಮಹಾಭಾರತಕ್ಕೆ ಹೋಲಿಸಿ ನಿತೀಶ್ ಕುಮಾರ್ ಅವರನ್ನು ರಾಮನಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ಪೋಸ್ಟರ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.

ಪಾಟ್ನಾದ ಆರ್‌ಜೆಡಿ (RJD) ಕಚೇರಿ ಮುಂಭಾಗ ಮತ್ತು ಆರ್‌ಜೆಡಿ ನಾಯಕಿ ರಾಬ್ರಿ ದೇವಿ ನಿವಾಸದ ಮುಂದೆ ಈ ಪೋಸ್ಟರ್ ಹಾಕಲಾಗಿದೆ.
ಬಿಜೆಪಿಯಸೋಲು, ಮಹಾಮೈತ್ರಿಕೂಟದ ಗೆಲುವನ್ನು ವಿವರಿಸಲು ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳನ್ನು ಬಳಸಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ನಿತೀಶ್ ಕುಮಾರ್ (ಮಹಾಘಟಬಂಧನ ನಾಯಕ) ಅವರನ್ನು ಭಗವಾನ್ ರಾಮ/ಕೃಷ್ಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ/ಕಂಸ ಎಂದು ಉಲ್ಲೇಖಿಸಲಾಗಿದೆ.

ಹೇಗೆ ರಾಮಾಯಣದಲ್ಲಿ ರಾಮ ರಾವಣನನ್ನು ಸೋಲಿಸಿದನೊ ಮತ್ತು ಮಹಾಭಾರತದಲ್ಲಿ ಕೃಷ್ಣನು ಕಂಸನನ್ನು ಹೇಗೆ ಸೋಲಿಸಿದನೊ ಅದೇ ರೀತಿ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿಕೂಟವು 2024ರ ಲೋಕಸಭೆ ಚುನಾವಣೆಯಲ್ಲಿ ಪಿಎಂ ಮೋದಿಯನ್ನು ಸೋಲಿಸುತ್ತದೆ ಎಂದು ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ.

ಈ ಪೋಸ್ಟರ್‌ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!