ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂದು ವಿವಾದಾತ್ಮಕ ಆದೇಶವನ್ನು ಹೊರಡಿಸಿದ್ದ ಸರ್ಕಾರ ಇದೀಗ ಯುಟರ್ನ್ ಹೊಡೆದಿದೆ.
ಹೌದು, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಆದೇಶ ನೀಡಿದ್ದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅದು ಪ್ರಿಂಟ್ ಮಿಸ್ಟೇಕ್ ಆಗಿದೆ, ಕೆಲವೊಂದು ಗೊಂದಲದಿಂದ ಈ ವಿವಾದ ಸೃಷ್ಟಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ಮನುಷ್ಯ ನಡೆಯುವಾಗ ಎಡವಿ ಬೀಳುವುದು ಸಹಜ. ಅದರಂತೆ ಒಂದು ಚಿಕ್ಕ ತಪ್ಪು ಮಾಡಲಾಗಿದೆ. ಇದನ್ನು ಬೇಕು ಅಂತ ಮಾಡಿಲ್ಲ, ಎಲ್ಲವನ್ನೂ ಸರಿಪಡಿಸಿ ಆದೇಶ ನೀಡುವುದಾಗಿ ತಿಳಿಸಿದರು.