ಹೊಸದಿಗಂತ ವರದಿ ಕಲಬುರಗಿ:
ಜಯತೀರ್ಥರ ಮೂಲವೃಂದಾವನದ ಬಗ್ಗೆ ವಿನಃ ಕಾರಣ ವಿವಾದ ಸೃಷ್ಟಿಸಿ ಭಕ್ತರ ನಂಬಿಕೆಗೆ ದ್ರೋಹ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿಪ್ರ ಸಮಾಜದ ಮುಖಂಡರು, ಶ್ರೀ ಜಯತೀರ್ಥರ ಭಕ್ತವೃಂದದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
೬೩೦ ವರ್ಷಗಳಿಂದ ಮಳಖೇಡವೇ ಶ್ರೀ ಜಯತೀರ್ಥರ ಮೂಲವೃಂದಾವನ ಸನ್ನಿಧಾನವೆಂದು ಪ್ರಶಿದ್ಧಿ ಪಡೆದಿದೆ.ನವ ವೃಂದವನದಲ್ಲಿನ ಶ್ರೀ ರಘುವರ್ಯತೀರ್ಥರ ಮೂಲವೃಂದಾವನಕ್ಕೆ ಜಯತೀರ್ಥರ ವೃಂದವನವೆAದು ಪ್ರತಿಪಾದಿಸುವ ಕೆಲಸ ನಡೆಯುತ್ತಿದೆ.ಮಳಖೇಡಕ್ಕೆಆಗಮಿಸಿ ಜಯತೀರ್ಥರನ್ನು ಪೂಜಿಸುವ ಲಕ್ಷಾಂತರ ಭಕ್ತರ ಭಾವನೆ ಜತೆ ಕೆಲವರು ಆಟವಾಡುತ್ತಿದ್ದಾರೆ. ಅಂಥ ಕಿಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕೊಪ್ಪಳ ಜಿಲ್ಲೆಯ ನವವೃಂದಾವನ ದಲ್ಲಿ ಉತ್ತರಾದಿ ಮಠದ ಯತಿ ಶ್ರೀ ರಘುವರ್ಯತೀರ್ಥರ ಮೂಲ ವೃಂದಾವನಕ್ಕೆ ಜಯತೀರ್ಥರ ವೃಂದಾವನ ಎಂದು ಬಿಂಬಿಸುತ್ತಿದ್ದಾರೆ. ಭಕ್ತರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಜುಲೈ 6,7 ಮತ್ತು8 ರಂದು ನವವೃಂದಾವನದ ರಘುವರ್ಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಜಯತೀರ್ಥರ ಆರಾಧನೆ ಮಾಡಲು ಕೆಲ ಕಿಡಿಗೇಡಿಗಳು ನಿರ್ಧಸಿದ್ದಾರೆ. ಆರಾಧನೆ ಮಾಡಲು ಕೊಪ್ಪಳ ಜಿಲ್ಲಾಡಳಿತ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಖಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.