ಹೊಸದಿಗಂಥ ಡಿಜಿಟಲ್ ಡೆಸ್ಕ್:
ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಬದುಕಿನ ಬುತ್ತಿಯನ್ನೇ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ಮುಖದಲ್ಲಿ ಈ ಬಾರಿಯ ಯುಗಾದಿ ಮತ್ತೆ ಮಂದಹಾಸ ಮೂಡಿಸಿದೆ.
ಮನೆ ನವೀಕರಣ ಭರವಸೆ ನೀಡಿದ್ದ ಗುರುಬೆಳದಿಂಗಳು ಫೌಂಡೇಶನ್, ಇದೀಗ ಆರು ಲಕ್ಷ ರೂ. ವೆಚ್ಚದಲ್ಲಿ ಹೊಸ ಲುಕ್ ಪಡೆದುಕೊಂಡ ಮನೆಯನ್ನು ಪುರುಷೋತ್ತಮ ಪೂಜಾರಿವರಿಗೆ ಇಂದು ಹಸ್ತಾಂತರಿಸಿದೆ.
ಅಟೋ ಚಾಲಕರಾಗಿರುವ ಪುರುಷೋತ್ತಮ್, ತಮ್ಮ ಮಗಳ ಮದುವೆಗೆ ಸಿದ್ಧತೆ ನಡೆಸುತ್ತಾ ಮನೆ ದುಸ್ತಿ ಕಾರ್ಯಕ್ಕೆ ಮುಂದಾಗಿದ್ದರು. ಈ ನಡುವೆ ೨೦೨೨, ನ.೧೯ರಂದು ಮಂಗಳೂರು ನಗರದ ಗರೋಡಿ ಸಮೀಪದ ರಸ್ತೆಯಲ್ಲಿ ಬಾಡಿಗೆ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಕ್ಕುಕರ್ ಬಾಂಬ್ ಸ್ಫೋಟಗೊಂಡು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ದುರ್ಘಟನೆ ಅವರನ್ನು ಕಂಗಾಲಾಗಿಸಿತ್ತು.
ಇದೇ ವೇಳೆ ಗುರುಬೆಳದಿಂಗಳು ಫೌಂಡೇಶನ್ ಮನೆಗೆ ಭೇಟಿ ನೀಡಿತ್ತಲ್ಲದೆ, ಮನೆ ನವೀಕರಿಸುವ ಭರವಸೆ ನೀಡಿತ್ತು. ಇದೀಗ ಪುರುಷೋತ್ತಮ್ ಅವರಿಗೆ ದೀಪಾವಳಿ ಕೊಡುಗೆಯಾಗಿ ನವೀಕರಣಗೊಂಡ ಮನೆ ಹಸ್ತಾಂತರವಾಗಿದೆ.