COOKING| ಎರಡೇ ನಿಮಿಷದಲ್ಲಿ ತಯಾರಾಗುತ್ತೆ ಆರೋಗ್ಯಕರ ಓಟ್ಸ್ ಶೇಕ್ ಡ್ರಿಂಕ್ಸ್

ಓಟ್ಸ್ ಶೇಕ್ ಒಂದು ಪೋಷಕಾಂಶದಿಂದ ಸಮೃದ್ಧ, ಸರಳ ಮತ್ತು ಆರೋಗ್ಯಕರ ಡ್ರಿಂಕ್ಸ್. ಇದು ಬೆಳಿಗ್ಗೆ ಉಪಹಾರಕ್ಕೆ ಅಥವಾ ತಿಂಡಿಯಾಗಿ ಉತ್ತಮ ಆಯ್ಕೆ. ಇದನ್ನ ಹೇಗೆ ಮಾಡೋದು ಅಂತ ನೋಡೋಣ.

ಬೇಕಾಗಿರುವ ಸಾಮಗ್ರಿಗಳು:

½ ಕಪ್ ಓಟ್ಸ್
1 ಕಪ್ ಹಾಲು
2 ಖರ್ಜೂರ ಅಥವಾ 1 ಚಮಚ ಜೇನುತುಪ್ಪ
½ ಏಲಕ್ಕಿ ಪುಡಿ
1 ಬಾಳೆಹಣ್ಣು
5 ಬಾದಾಮಿ

ಮಾಡುವ ವಿಧಾನ:

ಮೊದಲು ಓಟ್ಸ್ ಅನ್ನು ಬಾಣಲೆಗೆ ಹಾಕಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಹುರಿದ ಓಟ್ಸ್, ಹಾಲು, ಖರ್ಜೂರ/ಜೇನುತುಪ್ಪ, ಹಾಗೂ ಬಾಳೆಹಣ್ಣು, ಬಾದಾಮಿ ಸೇರಿಸಿ ಚೆನ್ನಾಗಿ ಬ್ಲೆಂಡ್ ಮಾಡಿದರೆ ಆರೋಗ್ಯಕರ ಓಟ್ಸ್ ಶೇಕ್ ರೆಡಿ.

ನಿಮಗೆ ಬೇಕಾದರೆ ಓಟ್ಸ್ ಅನ್ನು 10 ನಿಮಿಷ ನೀರಿನಲ್ಲಿ ನೆನೆಸಿ ಬಳಸಬಹುದು, ಹೆಚ್ಚುವರಿ ಪೌಷ್ಟಿಕಾಂಶಕ್ಕಾಗಿ ಚಿಯಾ ಸೀಡ್ಸ್ ಸೇರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!