ಬದನೆಕಾಯಿ ಭರ್ತಾ/ ಬೈಂಗನ್ ಭರ್ತಾ ಉತ್ತರ ಭಾರತದಲ್ಲಿ ಜನಪ್ರಿಯವಾದ ಒಂದು ರುಚಿಕರ ಪಲ್ಯ. ಇದನ್ನು ಅನ್ನ, ದೋಸೆ ಅಥವಾ ಚಪಾತಿಯೊಂದಿಗೆ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು:
ಬಾದನೆಕಾಯಿ – 1
ಎಣ್ಣೆ – 2 ಟೇಬಲ್ ಚಮಚ
ಹಸಿಮೆಣಸು – 2
ಈರುಳ್ಳಿ – 1
ಟೊಮೇಟೋ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಕರಿಬೇವಿನ ಸೊಪ್ಪು – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಶಿನ ಪುಡಿ – 1/2 ಟೀಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1/2 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಗರಂ ಮಸಾಲಾ – 1/2 ಟೀಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ
ತಯಾರಿಸುವ ವಿಧಾನ:
ಬದನೆಕಾಯಿಯನ್ನು ನೇರವಾಗಿ ಬೆಂಕಿಯ ಮೇಲಿಟ್ಟು, ಅದನ್ನು ಸುಟ್ಟು ತಣ್ಣಗಾಗಲು ಬಿಡಿ. ನಂತರ ಅದರ ಮೇಲಿನ ಸಿಪ್ಪೆ ತೆಗೆದು, ಒಳಗಿನ ಭಾಗವನ್ನು ಮ್ಯಾಶ್ ಮಾಡಿ.
ಒಂದು ಬಾಣಲೆಗೆ ಎಣ್ಣೆ ಹಾಕಿ, ಕರಿಬೇವಿನ ಸೊಪ್ಪು, ಹಸಿಮೆಣಸು, ಈರುಳ್ಳಿ ಸೇರಿಸಿ ಚನ್ನಾಗಿ ಫ್ರೈ ಮಾಡಿ. ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತೆ 2 ನಿಮಿಷ ಹುರಿಯಿರಿ. ನಂತರ ಟೊಮೇಟೋ ಸೇರಿಸಿ, ಅದು ಚೆನ್ನಾಗಿ ಫ್ರೈ ಆದ ನಂತರ ಎಲ್ಲ ಮಸಾಲೆ ಪುಡಿಗಳನ್ನು ಸೇರಿಸಿ.
ಈಗ ಮ್ಯಾಶ್ ಮಾಡಿದ ಬದನೆಕಾಯಿ ಸೇರಿಸಿ, ಚೆನ್ನಾಗಿ ಫ್ರೈ ಮಾಡಿ 5 ನಿಮಿಷ ಬೇಯಿಸಿ, ಕೊನೆಗೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿಯಾದ ಬೈಂಗನ್ ಭರ್ತಾ ಸವಿಯಲು ಸಿದ್ದ.