ಆಲೂಗಡ್ಡೆ ನಮ್ಮ ಅಡುಗೆಮನೆಯಲ್ಲಿ ಹೆಚ್ಚು ಬಳಸುವ ತರಕಾರಿ. ಸಾಂಬಾರ್, ಪಲ್ಯ, ಬಾಜಿ, ಚಿಪ್ಸ್ ಹೀಗೆ ಹಲವಾರು ಪದಾರ್ಥಗಳಲ್ಲಿ ಇದನ್ನು ಸೇರಿಸಲಾಗುತ್ತದೆ. ರುಚಿ ಹೆಚ್ಚಿಸುವ ಈ ತರಕಾರಿ ಸರಿಯಾದ ವಿಧಾನದಲ್ಲಿ ತಯಾರಿಸದಿದ್ದರೆ ಕೆಲವೊಮ್ಮೆ ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ಜೀರ್ಣಕ್ರಿಯೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಾವು ಸಾಮಾನ್ಯವಾಗಿ ಮಾಡುವ ಕೆಲವು ಸಣ್ಣ ತಪ್ಪುಗಳು ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತವೆ.
ಅಂಗಡಿಯಿಂದ ತಂದ ತಕ್ಷಣ ಫ್ರಿಜ್‌ನಲ್ಲಿ ಇಡುವುದು ಸಹ ಸರಿಯಾದ ವಿಧಾನವಲ್ಲ. ಇದರಿಂದ ಅದರ ರುಚಿ ಮತ್ತು ಗುಣಗಳಲ್ಲಿ ಬದಲಾವಣೆ ಆಗಬಹುದು. ಬದಲಿಗೆ ಒಣ, ಗಾಳಿ ಸಂಚರಿಸುವ ಸ್ಥಳದಲ್ಲಿ ಸಂಗ್ರಹಿಸಿದರೆ ಹೆಚ್ಚು ದಿನ ತಾಜಾಗಿರುತ್ತದೆ.
ಇದನ್ನೂ ಓದಿ:
ಆಲೂಗಡ್ಡೆಯನ್ನು ತುಂಬಾ ಹೆಚ್ಚು ಎಣ್ಣೆಯಲ್ಲಿ ತೀವ್ರ ಉಷ್ಣದಲ್ಲಿ ಕರಿಯುವುದರಿಂದ ಅದರಲ್ಲಿರುವ ಕೆಲವು ಅಂಶಗಳು ಬದಲಾಗಿ ದೇಹಕ್ಕೆ ಹಾನಿಕಾರಕವಾಗಬಹುದು. ಹೀಗಾಗಿ ಅತಿ ಕರಿದ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡುವುದು ಉತ್ತಮ. ಬದಲಿಗೆ ಬೇಯಿಸಿ ಅಥವಾ ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿ ಬಳಸುವುದು ಆರೋಗ್ಯಕರ.
ವಾರಪೂರ್ತಿ ಬಳಸಲು ಕೆಲವರು ಆಲೂಗಡ್ಡೆಗಳನ್ನು ಮೊದಲು ಬೇಯಿಸಿ ಫ್ರಿಜ್‌ನಲ್ಲಿ ಇಡುತ್ತಾರೆ. ಆದರೆ ಇದರಿಂದ ಅದರ ಗುಣಮಟ್ಟ ಕುಗ್ಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯವಿದ್ದಷ್ಟು ಮಾತ್ರ ತಾಜಾ ಬೇಯಿಸಿ ಬಳಸುವುದು ಉತ್ತಮ.



