ರಾಷ್ಟ್ರ ಕೂಟರ ನಾಡಿನಲ್ಲಿ ಸಹಕಾರ ಸಪ್ತಾಹ ಖುಷಿ ತಂದಿದೆ: ಜಿ.ಟಿ.ದೇವೆಗೌಡ

ಹೊಸದಿಗಂತ ವರದಿ, ಕಲಬುರಗಿ:

ವಾಷಿ೯ಕ ಸಹಕಾರ ಸಪ್ತಾಹ ಕಾಯ೯ಕ್ರಮವನ್ನು ಕಲಬುರಗಿ ಜಿಲ್ಲೆಯ ಸೇಡಂ, ನಲ್ಲಿ ಆಯೋಜನೆ ಮಾಡಿದ್ದು, ಮಾದರಿ ಕಾಯ೯ಕ್ರಮವಾಗಿ ಮಾಪ೯ಟ್ಟಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.

69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾಯ೯ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕದ ರಾಷ್ಟ್ರ ಕೂಟರ ನಾಡಿನಲ್ಲಿ ಸಹಕಾರ ಸಪ್ತಾಹ ಆಯೋಜಿಸಿರುವುದು ಅದರಲ್ಲೂ ಮಾದರಿಯಾಗಿ ಆಯೋಜಿಸಿರುವುದು ಖುಷಿ ತಂದಿದೆ ಎಂದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಹೇಗೆ ಸಂಸತ್ ಮೆಟ್ಟಿಲು ಮುಟ್ಟಿ ನಮಸ್ಕರಿಸಿ, ಹೇಗೆ ಸರಳತೆ ಮೆರೆದಿದ್ದಾರೆಯೋ, ಅದೇ ರೀತಿ ಅವರ ಹಾದಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸರಳ ವ್ಯಕ್ತಿತ್ವ ಹೊಂದಿದ್ದು, ಹಗಲಿರುಳು 20 ಗಂಟೆ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಹೆಚ್ಚಿನ ಸಾಲ ಕೊಡುವಂತಹ ಹಂಬಲ ಹೊಂದಿದ್ದಾರೆ ಎಂದರು.

ಯಶಸ್ವಿನಿ ಯೋಜನೆ ಮಾಡುವುದಿಲ್ಲ ಎಂಬುದಾಗಿ ಈ ಹಿಂದೆ ಕಾಂಗ್ರೆಸ್ ಸರಕಾರದವರು ಹೇಳಿದ್ದರು. ಆದರೆ ಬೊಮ್ಮಾಯಿ ಅವರು ದೃಢ ಮನಸ್ಸು ಮಾಡಿ ಮತ್ತೆ ಯಶಸ್ವೀನಿ ಯೋಜನೆ ಜಾರಿಗೆ ತಂದರು.

ಕೇಂದ್ರದ ಸಹಕಾರ ಇಲಾಖೆ ಸಹ ಉತ್ತಮ ಕೆಲಸ ಮಾಡುತ್ತಿದೆ. 21 ಡಿಸಿಸಿ ಬ್ಯಾಂಕ್ ಪ್ರಥಮ ಬಾರಿಗೆ ಲಾಭದಲ್ಲಿವೆ. ಸಿಎಂ ಅವರು ಈ ಹಿಂದೆ ಸಹಕಾರಿ, ಗೃಹ. ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರ ಖಾತೆಗಳನ್ನು ನಿಭಾಯಿಸಿದ್ದಾರೆ.

ಸಹಕಾರಿ ಸಪ್ತಾಹದಲ್ಲಿ ಇಷ್ಟೊಂದು ಜನ ಏಲ್ಲೂ ಸೇರಿಸರಲಿಲ್ಲ. ಆದರೆ ಸೇಡಂದಲ್ಲಿ ನಿರೀಕ್ಷೆ ಮೀರಿ ಜನ ಸೇರಿದ್ದಾರೆ. ಎಲ್ಲ ಸಹಕಾರಿ ಸಂಸ್ಥೆ ಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!