March 13, 2026
Friday, March 13, 2026
spot_img

ಕಾಪಿರೈಟ್ ವಿವಾದ: ಇಳಯರಾಜಗೆ ಶಾಕ್! 130 ಸಿನಿಮಾ ಹಾಡುಗಳ ಮೇಲೆ ನಿಮಗೆ ಹಕ್ಕಿಲ್ಲ ಎಂದ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ ಮತ್ತೆ ಕಾಪಿರೈಟ್ ವಿವಾದದ ಹಿನ್ನೆಲೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳ ವಿರುದ್ಧ ಹಕ್ಕು ಸಂಬಂಧಿತ ಪ್ರಕರಣಗಳನ್ನು ಹೂಡಿದ್ದ ಅವರು, ಇದೀಗ ಅದೇ ವಿಚಾರದಲ್ಲಿ ಹಿನ್ನಡೆಯನ್ನು ಎದುರಿಸಿದ್ದಾರೆ.

ಪ್ರಸಿದ್ಧ ಸಂಗೀತ ಸಂಸ್ಥೆಯಾದ ಸಾರೆಗಾಮ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪರಿಶೀಲಿಸಿ ಮಹತ್ವದ ತೀರ್ಪು ನೀಡಿದೆ. ಸಾರೆಗಾಮದ ಒಡೆತನದಲ್ಲಿರುವ ಸುಮಾರು 130 ಸಿನಿಮಾಗಳ ಹಾಡುಗಳ ಮೇಲೆ ಇಳಯರಾಜ ಅವರಿಗೆ ಹಕ್ಕಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ಚಿತ್ರದ ಸಂಗೀತದ ಮೊದಲ ಹಕ್ಕು ನಿರ್ಮಾಪಕರಿಗೆ ಸೇರಿದ್ದು, ಅವರಿಂದ ಹಕ್ಕು ಪಡೆದ ಸಂಸ್ಥೆಗಳೇ ಅದನ್ನು ಬಳಸುವ ಅಧಿಕಾರ ಹೊಂದಿರುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:

ಈ ಹಿಂದೆ ಇಳಯರಾಜ ಅವರು ಕೆಲವು ಹಾಡುಗಳನ್ನು ಅಮೆಜಾನ್ ಮ್ಯೂಸಿಕ್, ಐಟ್ಯೂನ್ಸ್ ಸೇರಿದಂತೆ ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿರುವುದಾಗಿ ಸಾರೆಗಾಮ ಆರೋಪಿಸಿತ್ತು. ಇದೀಗ ನ್ಯಾಯಾಲಯದ ತೀರ್ಪಿನಿಂದ ಹಲವು ಭಾಷೆಗಳ ಸಿನಿಮಾಗಳ ಹಾಡುಗಳ ಹಕ್ಕು ಪ್ರಶ್ನಾರ್ಥಕವಾಗಿದೆ.

ಇಳಯರಾಜ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಕಾಪಿರೈಟ್ ಪ್ರಕರಣಗಳನ್ನು ದಾಖಲಿಸಿದ್ದು, ತಮ್ಮ ಆತ್ಮೀಯ ಸ್ನೇಹಿತರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಲೈವ್ ಕಾರ್ಯಕ್ರಮಗಳ ಕುರಿತೂ ನೋಟಿಸ್ ನೀಡಿದ್ದ ಘಟನೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಸೋನಿ ಮ್ಯೂಸಿಕ್ ಸೇರಿದಂತೆ ಹಲವಾರು ಸಂಸ್ಥೆಗಳ ವಿರುದ್ಧವೂ ಅವರು ಕಾನೂನು ಹೋರಾಟ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !