ಕೊತ್ತಂಬರಿ ಸೊಪ್ಪು ಬರೀ ಅಲಂಕಾರಕ್ಕಲ್ಲ, ಅದನ್ನು ಪಾನೀಯಗಳಾಗಿ ಮಾಡಿ ಕುಡಿಯಬಹುದು.ಇದರಿಂದಾಗಿ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭ ಇದೆ. ಏನೆಲ್ಲಾ ಲಾಭ ನೋಡಿ..
ಅಜೀರ್ಣ, ಹೊಟ್ಟೆಯುಬ್ಬರ ಕಡಿಮೆ ಮಾಡುತ್ತದೆ
ಕೊತ್ತಂಬರಿ ಸೊಪ್ಪಿನ ನೀರನ್ನು ರಾತ್ರಿ ಸಮಯದಲ್ಲಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಸಾಮಾನ್ಯವಾಗಿ ಅಜೀರ್ಣ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ತಡೆಗಟ್ಟಲು, ಕೊತ್ತಂಬರಿ ನೀರನ್ನು ರಾತ್ರಿ ಸಮಯದಲ್ಲಿ ತೆಗೆದುಕೊಳ್ಳಬಹುದು. ಇದರಲ್ಲಿರುವ ಫೈಬರ್ ಅಂಶವು ಮಲಬದ್ಧತೆಯನ್ನು ತಡೆಗಟ್ಟಲು ಸಹಾಯ ಮಾಡುವುದರ ಜೊತೆಗೆ ಕರುಳು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಅದಲ್ಲದೆ ಕೊತ್ತಂಬರಿ ಸೊಪ್ಪು ನಿರ್ವಿಷಗೊಳಿಸುವ ಗುಣಗಳನ್ನು ಹೊಂದಿದ್ದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ರಕ್ತವನ್ನು ಶುದ್ಧೀಕರಿಸುತ್ತದೆ.
ಮಧುಮೇಹಿಗಳಿಗೆ ಬೆಸ್ಟ್
ಮಧುಮೇಹಿಗಳಿಗೆ ಕೊತ್ತಂಬರಿ ನೀರು ಪ್ರಯೋಜನಕಾರಿ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ನೀರು ಕಡಿಮೆ ಕ್ಯಾಲೋರಿ ಇರುವ ಪಾನೀಯವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಲಗುವ ಮೊದಲು ಇದನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಕಾಲಾನಂತರದಲ್ಲಿ ತೂಕ ಕಡಿಮೆಯಾಗುತ್ತದೆ.
ಒಳ್ಳೆ ನಿದ್ದೆ ಮಾಡಲು ಸಹಕಾರಿ
ಕೊತ್ತಂಬರಿ ಸೊಪ್ಪು ನಿಮ್ಮ ಮನಸ್ಸನ್ನು ಶಾಂತಗೊಳಿಸುವ ಗುಣಗಳನ್ನು ಹೊಂದಿದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಒಳ್ಳೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ರಾತ್ರಿ ಸಮಯದಲ್ಲಿ ಇದನ್ನು ಕುಡಿಯುವುದರಿಂದ ನರಮಂಡಲವು ವಿಶ್ರಾಂತಿ ಪಡೆಯುತ್ತದೆ. ಶಾಂತಿಯುತ ನಿದ್ರೆ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಜೊತೆಗೆ ವಿಟಮಿನ್ ಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.