ಹೊಸದಿಗಂತ ವರದಿ, ಧಾರವಾಡ:
ಎರಡು ವರ್ಷದಿಂದ ಮನುಕುಲದಿಂದ ದೂರವಾದ ಕೋವಿಡ್ ಸೋಂಕು ರಾಜ್ಯದಲ್ಲಿ ಪುನಃ ಕಾಣಿಸಿಕೊಂಡಿದ್ದು, ಶುಕ್ರವಾರ ಧಾರವಾಡದ ಮಹಿಳೆಯೊಬ್ಬರಲ್ಲಿ ದೃಢಪಟ್ಟಿದೆ.
ಧಾರವಾಡದ ಗುಲಗಂಜಿಕೊಪ್ಪದ 73 ವರ್ಷದ ಮಹಿಳೆ ತೀವ್ರ ಜ್ವರ ಹಾಗೂ ನೆಗಡಿಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಕೋವಿಡ್ ತಪಾಸಣೆ ನಡೆಸಿದಾಗ ಪಾಸಿಟಿವ್ ಪತ್ತೆಯಾಗಿದೆ.
ಸದ್ಯ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವೇ ಇಲ್ಲ ಎಂದು ಸ್ವತಃ ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.