ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೊರೋನಾ ಮಾರ್ಗಸೂಚಿ ಕಡಿತ: ಕೇಂದ್ರ ಆರೋಗ್ಯ ಸಚಿವಾಲಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕೊರೋನಾ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೇರಲಾಗಿದ್ದ ಕೋವಿಡ್ ಮಾರ್ಗಸೂಚಿ ಕ್ರಮಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೇರಲಾಗಿದ್ದ COVID-19 ಮಾರ್ಗಸೂಚಿಗಳನ್ನು ಮತ್ತಷ್ಟು ಸರಾಗಗೊಳಿಸಿದ್ದು, ಪ್ರಯಾಣಿಕರ RT-PCR ಆಧಾರಿತ ಪರೀಕ್ಷೆಯ ಹಿಂದಿನ ಅಗತ್ಯವನ್ನು ಕೈಬಿಟ್ಟಿದೆ. ಈ ಹಿಂದೆ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಯಾಣಕ್ಕೆ ಶೇ.2ರಷ್ಟು ಆರ್ಟಿ-ಪಿಸಿಆರ್ ಆಧಾರಿತ ಪರೀಕ್ಷೆಯ ಅವಶ್ಯಕತೆ ಇತ್ತು. ಈ ನಿಯಮವನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದೆ.

ಸದ್ಯ ಕೊರೊನಾ ಪರಿಸ್ಥಿತಿ ಮತ್ತು ಜಗತ್ತಿನಾದ್ಯಂತ ವ್ಯಾಕ್ಸಿನೇಷನ್ ಕವರೇಜ್ನಲ್ಲಿ (ಲಸಿಕೀಕರಣ) ಮಾಡಿದ ಮಹತ್ವದ ಸಾಧನೆಗಳನ್ನು ಗಮನಿಸಿದ ನಂತರ ಮಾರ್ಗಸೂಚಿಗಳನ್ನು ಸರಾಗಗೊಳಿಸಲಾಗಿದೆ. ಈ ಹೊಸ ಮಾರ್ಗಸೂಚಿಗಳು ಜುಲೈ 20 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
ಆದ್ರೂ ಕೂಡ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಹಿಂದಿನ ಸಲಹೆಯು ಅನ್ವಯಿಸುವುದನ್ನು ಮುಂದುವರಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!